ನವದೆಹಲಿ: ವಿಂಡ್ ಶೀಲ್ಡ್ ಬಿರುಕು ಬಿಟ್ಟ ಕಾರಣ ಪುಣೆ- ದೆಹಲಿಗೆ ಸಾಗುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
180 ಪ್ರಯಾಣಿಕರಿದ್ದ ಏರ್ ಇಂಡಿಯಾದ ಪುಣೆ-ದೆಹಲಿ ವಿಮಾನವು ಮಂಗಳವಾರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಘಟನೆ ಬಳಿಕ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ವಿಮಾನದ ಪೈಲಟ್ ತುರ್ತು ಲ್ಯಾಂಡಿಂಗ್ ಅನುಮತಿ ಕೇಳಿದ್ದು, ಅಂತಿಮವಾಗಿ 5.50 ಕ್ಕೆ ಐಜಿಐಗೆ ಇಳಿಯಿತು” ಎಂದು ಮೂಲಗಳು ತಿಳಿಸಿವೆ. ಹಕ್ಕಿ ತಗುಲಿ ಈ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.