ಹದಿನೆಂಟು ವರ್ಷಗಳ ನಂತರ ಒಂದಾದ ಜೋಸಿ-ಪೀಟರ್

ಹದಿನೆಂಟು ವರ್ಷಗಳ ನಂತರ ಒಂದಾದ ಜೋಸಿ-ಪೀಟರ್

May 26, 2016 06:01:30 PM (IST)

ವಾಷಿಂಗ್ಟನ್: ಹದಿನೆಂಟು ವರ್ಷಗಳ ಹಿಂದೆ ಬಾಲಕಿಯೊಬ್ಬಳನ್ನು ಅಗ್ನಿ ದುರಂತದಿಂದ ರಕ್ಷಿಸಿದ್ದ ಪೊಲೀಸ್ ಅಧಿಕಾರಿ ಪೀಟರ್ ಇಂದು ಆಕೆಯ ಪದವಿ ಪ್ರದಾನ ಸಮಾರಂಭಕ್ಕೆ ಆಗಮಿಸಿ ಆರ್ಶೀವದಿಸಿದರು.


ಅಮೇರಿಕದ ಕನೆಕ್ಟಿಕಟ್ ನಗದ ಅಪಾರ್ಟ್ ಮೆಟ್ ನಲ್ಲಿ 1998ರಲ್ಲಿ ನಡೆದ ಅಗ್ನಿ ಅವಘಡದಲ್ಲಿ 5 ವರ್ಷದ ಬಾಲಕಿ ಜೋಸಿಬೆಲ್ಕ್ ಳನ್ನು ಬೆಂಕಿಯಿಂದ ರಕ್ಷಿಸಿದ್ದರು. 23ರ ಯುವತಿ ಜೋಸಿಬೆಲ್ಕ್ ಅಮೆರಿಕದ ಈಸ್ಟರ್ನ್ ಕನೆಕ್ಟಿಕಟ್ ಸ್ಟೇಟ್ ಯುನಿವರ್ಸಿಟಿಯಿಂದ ಪದವಿ ಪಡೆದಿದ್ದಾಳೆ. ಈ ಕಾರ್ಯಕ್ರಮಕ್ಕೆ ನಿವೃತ್ತರಾಗಿರೋ ಪೊಲೀಸ್ ಅಧಿಕಾರಿ ಪೀಟರ್ ತಾನು ಬೆಂಕಿಯಿಂದ ರಕ್ಷಿಸಿದ್ದ ಜೋಸಿಬೆಲ್ಕ್ ಪದವಿ ಪ್ರಮಾಣಪತ್ರ ಸ್ವೀಕರಿಸುವುದನ್ನು ಆಕೆಯ ಕುಟುಂಬದವರೊಂದಿಗೆ ಕುಳಿತು ಕಣ್ತುಂಬಿಸಿಕೊಂಡಿದ್ದಾರೆ.

1998ರಲ್ಲಿ ನಡೆದ ಬೆಂಕಿ ಅವಘಡದಲ್ಲಿ ಅಪಾರ್ಟ್‍ಮೆಂಟಿನಲ್ಲಿ ಜೋಸಿ ಪ್ರಜ್ಞೆಯಿಲ್ಲದೆ ಬಿದಿದ್ದಳು. ಆಕೆಗೆ ಹೃದಯಾಘಾತವಾಗಿರಬಹುದು ಎಂಬ ಶಂಕೆಯೂ ಇತ್ತು. ಅಗ್ನಿ ಶಾಮಕ ಸಿಬ್ಬಂದಿ ಬಂಕರ್ ಗೇರ್ ಹಿಡಿದಿದ್ದರಿಂದ ಜೋಸಿಯನ್ನು ಸ್ವತಃ ಪೀಟರ್ ತನ್ನ ತೋಳಲ್ಲಿ ಎತ್ತಿಕೊಂಡು ಹೊರಗೆ ತಂದಿದ್ದರು. ಆ ಸಮಯದಲ್ಲಿ ಆಂಬುಲೆನ್ಸ್ ಕೂಡ ಲಭ್ಯವಿಲ್ಲದ ಕಾರಣ ತನ್ನ ಕಾರಿನಲ್ಲೇ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ದರು. ಮಾರ್ಗ ಮಧ್ಯದಲ್ಲಿ ಜೋಸಿಗೆ ತುರ್ತು ಚಿಕಿತ್ಸೆ ಕೂಡ ಮಾಡಿದ್ದರು. ಇದಾದ ಬಳಿಕ ಪೀಟರ್ ಬಾಲಕಿಯ ಬಗ್ಗೆ ತಿಳಿಯಲು ಹಲವಾರು ಬಾರಿ ಪ್ರಯತ್ನ ಮಾಡಿದ್ದರೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಎರಡು ವರ್ಷಗಳ ಹಿಂದೆ ಜೋಸಿ ಫೇಸ್ ಬುಕ್ ಮೂಲಕ ಪೀಟರ್ ನ ಸಂಪರ್ಕ ಹೊಂದಿ ಅವರಿಗೆ ಇಮೇಲ್ ಕಳುಹಿಸಿದ್ದಳು. ಆ ನಂತರ ಮತ್ತೆ ಇವರಿಬ್ಬರ ಮಾತುಕತೆ ಆರಂಭವಾಗಿ ಆಕೆಗೆ ಪದವಿ ಪ್ರದಾನ ಸಮಾರಂಭಕ್ಕೆ ಬರಲು ಸಾಧ್ಯವಾಯಿತು. ಹೇಗೆ ಜೋಸಿಗೆ ಪೀಟರ್ ನ ನೆನಪಿತ್ತೋ ಹಾಗೇಯೇ ಪೀಟರ್ ಗೂ ಆಕೆಯ ನೆನಪು ಇತ್ತು. ಆದರೆ ಆಕೆ ಎಲ್ಲಿದ್ದಾಳೇ ಎಂಬುದು ತಿಳಿಯದೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.

ಹಲವು ವರ್ಷಗಳ ನಂತರ ಜೋಸಿ ನನ್ನ ನೆನಪಿನಲ್ಲಿಟ್ಟು ಕೊಂಡಿರುವುದು ತುಂಬಾ ಸಂತೋಷವಾಯಿತು. ಆಕೆಯ ಅಮ್ಮ ನೀಡಿದ ಪೋಟೋ ಈಗಲೂ ಇಟ್ಟುಕೊಂಡಿದ್ದೇನೆ. ಪದವಿ ಪ್ರದಾನ ಸಮಾರಂಭಕ್ಕೆ ಆಗಮಿಸಿ ಆಕೆಯ ಭೇಟಿ ನನಗೆ ತುಂಬಾ ಖುಷಿ ನೀಡಿತು ಎಂದರು.