ಮಂಗಳಮುಖಿಯರಿಗಾಗಿ ಪ್ರತ್ಯೇಕ ಕ್ಲಿನಿಕ್ ತೆರೆಯಲು ಮುಂದಾದ ಕೇರಳ ಸರ್ಕಾರ

ಮಂಗಳಮುಖಿಯರಿಗಾಗಿ ಪ್ರತ್ಯೇಕ ಕ್ಲಿನಿಕ್ ತೆರೆಯಲು ಮುಂದಾದ ಕೇರಳ ಸರ್ಕಾರ

Sep 12, 2017 11:01:27 AM (IST)
ಮಂಗಳಮುಖಿಯರಿಗಾಗಿ ಪ್ರತ್ಯೇಕ ಕ್ಲಿನಿಕ್ ತೆರೆಯಲು ಮುಂದಾದ ಕೇರಳ ಸರ್ಕಾರ

ತಿರುವನಂತಪುರಂ: ಕೆಲ ತಿಂಗಳ ಹಿಂದೆಯಷ್ಟೇ ಕೇರಳದ ಕೊಚ್ಚಿ ಮೆಟ್ರೋ ರೈಲ್ವೆ ನಿಗಮ 23 ಮಂಗಳಮುಖಿಯರಿಗೆ ಉದ್ಯೋಗ ನೀಡಿ ಮಂಗಳಮುಖಿಯರ ಬದುಕಿನಕಲ್ಲಿ ಹೊಸ ಆಶಾ ಕಿರಣವನ್ನು ಮೂಡಿಸಿತ್ತು. ಇದೀಗ ಅಂತಹದ್ದೇ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಅಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಿಂಗ ಪರಿವರ್ತಿತರಿಗಾಗಿ ಪ್ರತ್ಯೇಕ ಕ್ಲಿನಿಕ್ ಆರಂಭಿಸಲಾಗುವುದು ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

 

ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಕ್ಲಿನಿಕ್ ಆರಂಭವಾಗಿದ್ದು, ಪ್ರತಿ ತಿಂಗಳಿನ ಮೊದಲ ಮಂಗಳವಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಲಿಂಗ ಪರಿವರ್ತಿತರ ಕ್ಲಿನಿಕ್ನಲ್ಲಿ ಐವರು ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ. ಶಸ್ತ್ರಚಿಕಿತ್ಸಕರು, ಮನೋವೈದ್ಯಶಾಸ್ತ್ರ, ಚರ್ಮಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ ಸೇವೆಗಳು ಕ್ಲಿನಿಕ್ನಲ್ಲಿ ದೊರೆಯಲಿವೆ. ಕ್ಲಿನಿಕ್ಗೆ ಹೊರತಾಗಿ ಲಿಂಗ ಪರಿವರ್ತಿತರಿಗೆಂದೇ ಎರಡು ಶಸ್ತ್ರ ಚಿಕಿತ್ಸೆ ಘಟಕಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. ಇದೂ ಸಹ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಒಂದು ತಿಂಗಳ ಒಳಗಾಗಿ ಪ್ರಾಯೋಗಿಕವಾಗಿ ಆರಂಭವಾಗಲಿದೆ.

ಕ್ಲಿನಿಕ್ಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಇದಕ್ಕಾಗಿ ಲಿಂಗ ಪರಿವರ್ತಿತರಿಗೆ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.