ಶ್ರೀಲಂಕಾ ನೌಕಾದಳದ ಸೈನಿಕರಿಂದ ಭಾರತೀಯ ಮೀನುಗಾರರ ಮೇಲೆ ಏಕಾಏಕಿ ಗುಂಡಿನ ದಾಳಿ: ಓರ್ವ ಸಾವು

ಶ್ರೀಲಂಕಾ ನೌಕಾದಳದ ಸೈನಿಕರಿಂದ ಭಾರತೀಯ ಮೀನುಗಾರರ ಮೇಲೆ ಏಕಾಏಕಿ ಗುಂಡಿನ ದಾಳಿ: ಓರ್ವ ಸಾವು

Mar 07, 2017 02:48:52 PM (IST)

ರಾಮೇಶ್ವರ: ಶ್ರೀಲಂಕಾ ನೌಕಾದಳದ ಸೈನಿಕರು ಭಾರತೀಯ ಮೀನುಗಾರರ ಮೇಲೆ ಮಂಗಳವಾರ ಏಕಾಏಕಿ ಗುಂಡಿನ ದಾಳಿ ನಡೆಸಿ ಒಬ್ಬ ಮೀನುಗಾರನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೃತ ಮೀನುಗಾರನನ್ನು ತಮಿಳುನಾಡಿನ ರಾಮೇಶ್ವರದ ಬ್ರಿಡೋ ಎಂದು ಗುರುತಿಸಲಾಗಿದ್ದು, ಭಾರತ ಮತ್ತು ಶ್ರೀಲಂಕಾ ನಡುವಿನ ಸಮುದ್ರದ ಗಡಿಯಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಮೀನುಗಾರರಿಗೆ ಗಾಯಗಳಾಗಿವೆ.

ಭಾರತೀಯ ಮೀನುಗಾರರು ಮೀನು ಹಿಡಿಯುವ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿದ ಲಂಕಾದ ನೌಕಾದಳ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಅಧಿಕಾರಿಗಳು ವಿದೇಶಾಂಗ ಇಲಾಖೆ ಸೇರಿದಂತೆ ಪ್ರಧಾನಿ ಕಚೇರಿಗೂ ಪ್ರಕರಣದ ಮಾಹಿತಿ ನೀಡಿದ್ದು, ರಾಮೇಶ್ವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಸಂಬಂಧ ದೂರು ದಾಖಲಾಗಿದೆ.