ನಾಗರಿಕ ಅಣು ಶಕ್ತಿ ಬಳಕೆಗೆ ಭಾರತ-ಜಪಾನ್ ಒಪ್ಪಂದ

ನಾಗರಿಕ ಅಣು ಶಕ್ತಿ ಬಳಕೆಗೆ ಭಾರತ-ಜಪಾನ್ ಒಪ್ಪಂದ

Dec 12, 2015 05:31:53 PM (IST)

ಹೊಸದಿಲ್ಲಿ: ಭಾರತ ಮತ್ತು ಜಪಾನ್ ನಾಗರಿಕ ಅಣು ಶಕ್ತಿ ಬಳಕೆಗೆ ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದೆ.

India, Japan ink MoU on peaceful use of n-energy-1ಪರಮಾಣು ವಿದ್ಯುತ್, ಮುಂಬೈ ಟು ಅಹಮ್ಮದಾಬಾದ್ ನಡುವಿನ ಬುಲೆಟ್ ರೈಲು ಓಡಾಟ ಒಡಂಬಡಿಕೆ ಸೇರಿದಂತೆ ನಾಲ್ಕು ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಜಪಾನ್ ಶನಿವಾರ ಸಹಿ ಹಾಕಿದ್ದು, ಈ ಒಪ್ಪಂದದ ಉದ್ದೇಶ ಕೇವಲ ವಾಣಿಜ್ಯ ಮತ್ತು ಸ್ವಚ್ಛ ಇಂಧನವಷ್ಟೇ ಅಲ್ಲ ಬದಲಾಗಿ ಜಾಗತಿಕ ಭದ್ರತೆಯ ಸಲುವಾಗಿ ಪರಸ್ಪರ ಸಂಬಂಧ ಮತ್ತು ನಂಬಿಕೆಯ ಒಪ್ಪಂದ ಎಂದು ಬಣ್ಣಿಸಲಾಗಿದೆ.

ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಉನ್ನತವಾದ ಮೌಲ್ಯ ಇದೆ ಎಂದಿರುವ ಮೋದಿ ಭಾರತಕ್ಕೆ ವಿಶಿಷ್ಟವಾಗಿರುವ ಆರ್ಥಿಕ ಪ್ರಸ್ತಾವನೆಗಳಿಗೆ ಶಿಸ್ನೋ ಪ್ರಾಮಾಣಿಕವಾಗಿ ಮತ್ತು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜಪಾನಿನ ಖಾಸಗಿ ಹೂಡಿಕೆ ಕೂಡ ಹೆಚ್ಚಳಗೊಂಡಿದೆ ಎಂದರು.