
ಪಿಥೋರಗಢ: ಭೂಕುಸಿತದಿಂದಾಗಿ ಮೃತಪಟ್ಟ ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹವನ್ನು ತಲುಪಿಸಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ)ಯ ಸೈನಿಕರು ಎಂಟು ಗಂಟೆಗಳಲ್ಲಿ ಸುಮಾರು 25 ಮೀಟರ್ ನಡೆದುಕೊಂಡೇ ಹೋಗಿರುವ ಘಟನೆಯು ನಡೆದಿದೆ.
ಉತ್ತರಾಖಂಡದ ಪಿಥೋರಘಢದ ತುಂಬಾ ಹಳ್ಳಿಗಾಡು ಪ್ರದೇಶವಾದ ಮುನಸ್ಯರಿಯಲ್ಲಿರುವ ಯುವಕನ ಕುಟುಂಬ ತಲುಪಿಸಲು ಐಟಿಬಿಪಿ ಸೈನಿಕರು ನಡೆದುಕೊಂಡೇ ಹೋಗಿದ್ದಾರೆ ಮತ್ತು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿರುವರು.
ಭಾರೀ ಮಳೆಯಿಂದಾಗಿ ಬಂಡೆಗಳು ಕುಸಿದ ಪರಿಣಾಮವಾಗಿ ಯುವಕ ಮೃತಪಟ್ಟಿದ್ದಾನೆ ಮತ್ತು ಐಟಿಬಿಪಿ ಜವಾನರು ದುರ್ಗಮ ಪ್ರದೇಶಕ್ಕೆ ತೆರಳಿ ಯುವಕನ ಶವವನ್ನು ಅವಶೇಷಗಳಿಂದ ತೆಗೆದು ಮನೆಯವರಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡಿರುವರು.