ಲಿಟ್ಟಿ ಚೋಖ ತಿಂದು ಮಡಕೆ ಚಾ ಕುಡಿದ ಪ್ರಧಾನಿ ಮೋದಿ

ಲಿಟ್ಟಿ ಚೋಖ ತಿಂದು ಮಡಕೆ ಚಾ ಕುಡಿದ ಪ್ರಧಾನಿ ಮೋದಿ

HSA   ¦    Feb 19, 2020 06:26:51 PM (IST)
ಲಿಟ್ಟಿ ಚೋಖ ತಿಂದು ಮಡಕೆ ಚಾ ಕುಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯಲ್ಲಿರುವ ಹುನಾರ್ ಹಾತ್ ಗೆ ಭೇಟಿ ನೀಡಿ ಅಲ್ಲಿ ಲಿಟ್ಟಿ ಚೋಖ ಮತ್ತು ಕುಲ್ಹಾದ್ ಚಾ ಸವಿದು ಎಲ್ಲರನ್ನು ಅಚ್ಚರಿಗೀಡು ಮಾಡಿದರು.

ಕೇಂದ್ರ ಸಚಿವರ ಜತೆಗೆ ಸಭೆ ನಡೆಸಿದ ಬಳಿಕ ರಾಜ್ ಪತ್ ನಲ್ಲಿರುವ ಹುನಾರ್ ಹಾತ್ ಗೆ ಭೇಟಿ ನೀಡಿದ ಮೋದಿ ಅವರು ಅಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದರು. ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯದಿಂದ ಹುನಾರ್ ಹಾತ್ ನ್ನು ಆಯೋಜಿಸಲಾಗಿದೆ.

50 ನಿಮಿಷ ಕಾಲ ಇಲ್ಲಿ ಕಳೆದ ಪ್ರಧಾನಿ ಅವರು ಬಿಹಾರ, ಜಾರ್ಖಂಡ್, ಪೂರ್ವ ಉತ್ತರ ಪ್ರದೇಶದಲ್ಲಿ ಜನಪ್ರಿಯವಾಗಿರುವಂತಹ ಲಿಟ್ಟಿ ಚೋಖ ಸವಿದರು. ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಪ್ರಧಾನಿ ಅವರಿಗೆ ಕುಲ್ಹಾದ್ ನಲ್ಲಿ ಚಾ ನೀಡಿದರು.

ಈ ಬಗ್ಗೆ ಪ್ರಧಾನಿ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೂಡ ಹಂಚಿಕೊಂಡಿರುವರು.