ಶಾಲಾ ವಾಹನಕ್ಕೆ ರೈಲು ಡಿಕ್ಕಿ 13 ಮಕ್ಕಳ ದುರ್ಮರಣ

ಶಾಲಾ ವಾಹನಕ್ಕೆ ರೈಲು ಡಿಕ್ಕಿ 13 ಮಕ್ಕಳ ದುರ್ಮರಣ

SRJ   ¦    Apr 26, 2018 10:38:30 AM (IST)
ಶಾಲಾ ವಾಹನಕ್ಕೆ ರೈಲು ಡಿಕ್ಕಿ 13 ಮಕ್ಕಳ ದುರ್ಮರಣ

ಲಖನೌ: ಸ್ಕೂಲ್ ಬಸ್ಸಿಗೆ ರೈಲು ಡಿಕ್ಕಿಯಾದ ಪರಿಣಾಮ 13 ಪುಟ್ಟ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಖುಷಿ ನಗರ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, 13 ಮಕ್ಕಳ ಸಹಿತ 7 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಚಾಲಕನಿಗೆ ಗಂಭಿರ ಗಾಯಗಳಾಗಿದ್ದು, ಗಾಯಾಳುಗಳನ್ನು ಕುಶಿ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬನಾರಸ್ ವಿಭಾಗದ ದುಧಿ ರೈಲೈ ನಿಲ್ದಾಣದ ಸಮೀಪ ಬೆಹಪುರ್ ವಾ ಎಂಬಲ್ಲಿ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವೇಳೆ ಶಾಲಾ ವಾಹನ ಕಾವಲು ರಹಿತ ರೈಲ್ವೆ ಕ್ರಾಸಿಂಗ್ ಬಳಿ ಸಂಚರಿಸುತ್ತಿದ್ದಾಗ, ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಡಿಕ್ಕಿಯ ರಭಸಕ್ಕೆ ಶಾಲಾ ವಾಹನ ನಜ್ಜು-ಗುಜ್ಜಾಗಿದ್ದು, ವಾಹನದಲ್ಲಿ ಸುಮಾರು 25 ಮಂದಿ ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನವರು 10 ವರ್ಷದ ಒಳಗಿನವರು ಎಂದು ಹೇಳಲಾಗುತ್ತಿದೆ.

ದಾರುಣ ಘಟನೆ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ಸೂಚಿಸಿದ್ದು, ಮೃತಪಟ್ಟವರ ಕುಟುಂಬ ವರ್ಗಕ್ಕೆ ಪರಿಹಾರ ಧನ ಘೋಷಿಸಿದ್ದಾರೆ.