ಜೂನ್ 20ರ ತನಕ ಚೀನಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಗಳು ರದ್ದು

ಜೂನ್ 20ರ ತನಕ ಚೀನಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಗಳು ರದ್ದು

HSA   ¦    Feb 20, 2020 02:12:29 PM (IST)
ಜೂನ್ 20ರ ತನಕ ಚೀನಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಗಳು ರದ್ದು

ನವದೆಹಲಿ: ಕೊರೋನಾ ವೈರಸ್ ಭೀತಿಯಿಂದ ಕೇಂದ್ರ ಸರ್ಕಾರವು ಚೀನಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಗಳನ್ನು ಜೂನ್ 20ರ ತನಕ ರದ್ದುಗೊಳಿಸಿದೆ.

ಚೀನಾದಲ್ಲಿ ಇದುವರೆಗೆ ಸುಮಾರು 2118 ಮಂದಿ ಕೊರೋನಾ ವೈರಸ್ ನಿಂದಾಗಿ ಮೃತಪಟ್ಟಿದ್ದಾರೆ. ಇದಕ್ಕೆ ಮೊದಲು ಮಾರ್ಚ್ 28ರ ತನಕ ಚೀನಾಗೆ ಎಲ್ಲಾ ವಿಮಾನಗಳನ್ನು ರದ್ದು ಮಾಡಲಾಗಿತ್ತು.

ಬುಧವಾರ ಸಂಜೆ ವೇಳೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಏರ್ ಇಂಡಿಯಾದ ಮುಖ್ಯ ಆಡಳಿತ ನಿರ್ದೇಶಕ ಘೋಷಣೆ ಮಾಡಲಿರುವರು.