ಪಂಚ ರಾಜ್ಯಗಳ ಚುನಾವಣೆ: ಉತ್ತರಪ್ರದೇಶ, ಉತ್ತರಾಖಂಡ, ಗೋವಾದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್, ಮಣಿಪುರದಲ್ಲಿ ಕಾಂಗ್ರೆಸ್ ಅಲೆ

ಪಂಚ ರಾಜ್ಯಗಳ ಚುನಾವಣೆ: ಉತ್ತರಪ್ರದೇಶ, ಉತ್ತರಾಖಂಡ, ಗೋವಾದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್, ಮಣಿಪುರದಲ್ಲಿ ಕಾಂಗ್ರೆಸ್ ಅಲೆ

Mar 11, 2017 10:16:08 AM (IST)

ಹೊಸದಿಲ್ಲಿ: ಪಂಚರಾಜ್ಯ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಆರಂಭಿಕ ಭಾರಿ ಮುನ್ನಡೆ ಸಾಧಿಸಿದೆ.

Live elections 2017: BJP, Congress lead in UP and Punjab respectively-3
ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆ ಪಡೆದಿದ್ದು, ಮಹಾ ಮೈತ್ರಿ ಹೊರತಾಗಿಯೂ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳು ಹಿನ್ನಡೆ ಸಾಧಿಸಿವೆ. ಇನ್ನು ಉತ್ತರಾಂಖಂಡದಲ್ಲೂ ಅಢಳಿತಾರೂಢ ಬಿಜೆಪಿ ಮುನ್ನಡೆಯಲ್ಲಿದ್ದು,  ಸಿಎಂ ಹರೀಶ್ ರಾವತ್ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರದತ್ತ ದಾಪುಗಾಲಿರಿಸಿದೆ. ಇನ್ನು ಮಣಿಪುರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 1 ರಲ್ಲಿ ಮುನ್ನಡೆ ಸಾಧಿಸಿದೆ.
ಗೋವಾ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ, ಒಟ್ಟು 40 ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಉತ್ತರ ಪ್ರದೇಶ:  ಬಿಜೆಪಿ–90 ಎಸ್ಪಿ/ಕಾಂಗ್ರೆಸ್–60  ಬಿಎಸ್ಪಿ–37
ಉತ್ತರಾಖಂಡ:   ಬಿಜೆಪಿ–14 ಕಾಂಗ್ರೆಸ್–03  ಇತರೆ–00
ಗೋವಾ:          ಬಿಜೆಪಿ–04,  ಕಾಂಗ್ರೆಸ್–02, ಎಎಪಿ–01,  ಇತರೆ–00
ಮಣಿಪುರ:         ಬಿಜೆಪಿ–01,  ಕಾಂಗ್ರೆಸ್–06,
ಪಂಜಾಬ್:         ಬಿಜೆಪಿ/ಎಸ್ಎಡಿ–10,  ಕಾಂಗ್ರೆಸ್–29, ಎಎಪಿ–15