ಬ್ರಿಟನ್ ರಾಜಕುಮಾರ ಚಾರ್ಲ್ಸ್ ಗೆ ಕೊವಿಡ್-19 ಸೋಂಕು ದೃಢ

ಬ್ರಿಟನ್ ರಾಜಕುಮಾರ ಚಾರ್ಲ್ಸ್ ಗೆ ಕೊವಿಡ್-19 ಸೋಂಕು ದೃಢ

HSA   ¦    Mar 25, 2020 04:24:43 PM (IST)
ಬ್ರಿಟನ್ ರಾಜಕುಮಾರ ಚಾರ್ಲ್ಸ್ ಗೆ ಕೊವಿಡ್-19 ಸೋಂಕು ದೃಢ

ಲಂಡನ್: ಬ್ರಿಟನ್  ರಾಜಕುಮಾರ ಚಾರ್ಲ್ಸ್ ಅವರಿಗೆ ಕೊರೋನಾ  ಸೋಂಕು ಇರುವುದು ದೃಢಪಟ್ಟಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪ್ರಿನ್ಸ್ ಚಾರ್ಲ್ಸ್ ಅವರು ನಮಸ್ತೆ ಮಾಡುವಂತಹ ವಿಡಿಯೋವು ತುಂಬಾ ವೈರಲ್ ಆಗಿತ್ತು. ಆದರೆ ಅವರಿಗೂ ಸೋಂಕು ತಗುಲಿರುವುದು ಈಗ ರಾಜಮನೆತನವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಪ್ರಿನ್ಸ್ ಚಾರ್ಲ್ಸ್ ಅವರ ಪತ್ನಿಯನ್ನು ಕೂಡ ಕ್ವಾರೆಂಟೈನ್ ನಲ್ಲಿ ಇಡಲು ಸೂಚಿಸಲಾಗಿದೆ.