ದಟ್ಟ ಮಂಜಿನಿಂದ 45 ರೈಲುಗಳ ಸಂಚಾರ ತಡ

ದಟ್ಟ ಮಂಜಿನಿಂದ 45 ರೈಲುಗಳ ಸಂಚಾರ ತಡ

YK   ¦    Nov 27, 2017 01:01:34 PM (IST)
 ದಟ್ಟ ಮಂಜಿನಿಂದ 45 ರೈಲುಗಳ ಸಂಚಾರ ತಡ

ನವದೆಹಲಿ: ನಗರದಲ್ಲಿ ಸೋಮವಾರ ದಟ್ಟ ಮಂಜುವಿನಿಂದ 45 ರೈಲುಗಳ ಸಂಚಾರ ತಡವಾಗಿದ್ದು, ಕೆಲ ರೈಲುಗಳ ವೇಳೆ ಬದಲಾಗಿ ಇನ್ನೂ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡ ದಟ್ಟ ಮಂಜಿನಿಂದಾಗಿ 45 ರೈಲುಗಳ ಸಂಚಾರ ತಡವಾಗಿದೆ. ನಾಲ್ಕು ರೈಲುಗಳ ವೇಳೆ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದ್ದಾಗಿ ವರದಿಯಾಗಿದೆ.


ಪ್ರಸ್ತುತ ನವದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ. ಪದೇ ಪದೇ ಇಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಮುಂದಿನ ದಿನಗಳಲ್ಲಿ ದೆಹಲಿಯ ಮಾಲಿನ್ಯ ಮಟ್ಟ ಇನ್ನೂ ಕೆಟ್ಟ ಪರಿಸ್ಥಿತಿಯನ್ನು ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.