ಪ.ಬಂಗಾಳ, ಒಡಿಶಾಗೆ ವಿಶೇಷ ರೈಲು ರದ್ದು

ಪ.ಬಂಗಾಳ, ಒಡಿಶಾಗೆ ವಿಶೇಷ ರೈಲು ರದ್ದು

HSA   ¦    May 20, 2020 10:41:39 AM (IST)
ಪ.ಬಂಗಾಳ, ಒಡಿಶಾಗೆ ವಿಶೇಷ ರೈಲು ರದ್ದು

ಮುಂಬಯಿ: ಅಂಫಾನ್ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಒಡಿಶಾಗೆ ಬಡಿಯುವ ಕಾರಣದಿಂದಾಗಿ ಮಹಾರಾಷ್ಟ್ರವು ವಿಶೇಷ ರೈಲುಗಳನ್ನು ರದ್ದು ಮಾಡಿದೆ.

ಭಾರತೀ ತೀವ್ರತೆಯ ಚಂಡಮಾರುತವು ಇದಾಗಿದ್ದು, ಇಂದು ಮಧ್ಯಾಹ್ನ ವೇಳೆಗೆ ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಹೀಗಾಗಿ ಎನ್ ಡಿಆರ್ ಎಫ್ ತಂಡಗಳು ಈ ಪ್ರದೇಶಘಳಲ್ಲಿ ಬೀಡು ಬಿಟ್ಟಿದೆ.

ರಸ್ತೆ, ರೈಲು ಮತ್ತು ಸಮುದ್ರ ಪ್ರದೇಶದಲ್ಲಿ ಇದು ಭಾರೀ ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಹೇಳಿದೆ.