ಗಿರ್ ತಳಿಯ ಗೋ ಮೂತ್ರದಲ್ಲಿ ಚಿನ್ನದ ಅಂಶ ಪತ್ತೆ

ಗಿರ್ ತಳಿಯ ಗೋ ಮೂತ್ರದಲ್ಲಿ ಚಿನ್ನದ ಅಂಶ ಪತ್ತೆ

Jun 28, 2016 04:20:50 PM (IST)

ಜುನಾಗಢ್: ಜುನಗಢ್ ಕೃಷಿ ವಿವಿಯ ಸಂಶೋಧಕರು ಗಿರ್ ಎಂಬ ತಳಿಯ ಹಸುಗಳ ಗೋ ಮೂತ್ರದಲ್ಲಿ ಚಿನ್ನದ ಅಂಶವನ್ನು ಪತ್ತೆ ಹಚ್ಚಿದ್ದಾರೆ.

ಗೋಮೂತ್ರದಲ್ಲಿ ಚಿನ್ನದ ಅಂಶ ಇದೆಯೋ ಇಲ್ಲವೋ ಎಂಬುದನ್ನ ಪತ್ತೆ ಹಚ್ಚಲು ಮುಂದಾಗಿದ್ದ ಗೋಲಾಕಿಯಾ ಅವರು 4 ವರ್ಷಗಳಿಂದ ಒಟ್ಟು 400 ಗಿರ್ ಹಸುಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಪ್ರತಿ ಒಂದು ಲೀಟರ್ ಗೋಮೂತ್ರದಲ್ಲಿ 3 ಮಿಲಿ ಗ್ರಾಂ ನಿಂದ 10 ಮಿಲಿ ಗ್ರಾಂ ಚಿನ್ನದ ಅಂಶ ಪತ್ತೆಯಾಗಿದ್ದು, ಕೆಮಿಕಲ್ ಬಳಸಿ ಗೋಮೂತ್ರದಿಂದ ಚಿನ್ನವನ್ನು ಬೇರ್ಪಡಿಸಬಹುದೆಂದು ಗೋಲಾಕಿಯಾ ಹೇಳಿದ್ದಾರೆ.

ಗೋಮೂತ್ರದಿಂದ ಚಿನ್ನದ ಅಂಶವನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೊರತೆಗೆಯಬಹುದು ಎಂದು ಡಾ. ಬಿಎ ಗೋಲಕಿಯ ಮಾಹಿತಿ ನೀಡಿದ್ದಾರೆ. ಗೋವಿನ ಮೂತ್ರ ಮಾತ್ರವಲ್ಲದೆ ಒಂಟೆ, ಎಮ್ಮೆ, ಕುರಿ, ಅದು ಸೇರಿದಂತೆ ಹಲವು ಪ್ರಾಣಿಗಳ ಮೂತ್ರಗಳನ್ನು ಸಂಶೋಧನೆಗೆ ಒಳಪಡಿಸಿದ್ದಾರೆ. ಆದರೆ ಇದರಲ್ಲಿ ಗೋವಿನ ಮೂತ್ರದಲ್ಲಿರುವಂತೆ ಪ್ರತಿಜೀವಕ ಅಂಶಗಳು ಪತ್ತೆಯಾಗಿಲ್ಲ ಎಂದು ಸಂಶೋಧನಾ ತಂಡ ತಿಳಿಸಿದೆ.