ದೇಶದಲ್ಲಿ 50 ಲಕ್ಷ ದಾಟಿದ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ

ದೇಶದಲ್ಲಿ 50 ಲಕ್ಷ ದಾಟಿದ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ

Megha R Sanadi   ¦    Sep 16, 2020 02:26:22 PM (IST)
ದೇಶದಲ್ಲಿ 50 ಲಕ್ಷ ದಾಟಿದ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ

ನವದೆಹಲಿ:  ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 90,123 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿದ್ದು, ಅಮೆರಿಕಾ ಬಳಿಕ ನಂತರ 50 ಲಕ್ಷ ಗಡಿ ದಾಟಿದ ವಿಶ್ವದ ಎರಡನೇ ರಾಷ್ಟ್ರವಾಯಿತು. ಇದರಿಂದ  ಭಾರತದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 50,20,360ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

9,95,933 ಸಕ್ರಿಯ ಪ್ರಕರಣಗಳಿದ್ದು, 39,42,361 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ -19ನಿಂದ 1,290 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 82,066ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಮೆರಿಕಾ ನಂತರದ ಕೋವಿಡ್ -19 ಪ್ರಕರಣಗಳ ವಿಷಯದಲ್ಲಿ ಭಾರತ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದ್ದು, ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ಕೋವಿಡ್  ಪ್ರಕರಣಗಳು 21 ದಿನಗಳಲ್ಲಿ 10 ಲಕ್ಷದಿಂದ 20 ಲಕ್ಷಕ್ಕೆ ಜಿಗಿದಿತ್ತು.  ನಂತರ 30 ಲಕ್ಷ ದಾಟಲು ಇನ್ನೂ 16 ದಿನಗಳು, 40 ಲಕ್ಷ ದಾಟಲು 13 ದಿನಗಳು ಮತ್ತು 50 ಲಕ್ಷ ದಾಟಲು 11 ದಿನಗಳು ತೆಗೆದುಕೊಂಡಿದೆ ಎಂದು ವರದಿಗಳು ತಿಳಿಸುತ್ತಿವೆ.

ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿಯೇ  ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 60% ದಾಖಲಾಗಿದೆ.