ಬೀದಿ ಬದಿಯಲ್ಲಿ ವಾಸ ಮಾಡತ್ತಿರುವ ಪಂಜಾಬ್ ಮಾಜಿ ಶಾಸಕ

ಬೀದಿ ಬದಿಯಲ್ಲಿ ವಾಸ ಮಾಡತ್ತಿರುವ ಪಂಜಾಬ್ ಮಾಜಿ ಶಾಸಕ

Jun 23, 2016 06:47:15 PM (IST)

ಚಂಡೀಗಢ: ಮನೆಯಿಲ್ಲದೇ ಬೀದಿ ಬದಿಯಲ್ಲಿ ಟೆಂಟ್ ಹಾಕಿ ವಾಸ ಮಾಡುತ್ತಿದ್ದಾರೆ ಪಂಜಾಬ್ ನ ಮಾಜಿ ಶಾಸಕ ಹಾಗೂ ಅವರ ಕುಟುಂಬಸ್ಥರು.

ಎರಡು ಬಾರಿ ಶಾಸಕರಾಗಿದ್ದ ಶಿಂಗಾರ ರಾಮ್ ಶಹುಂಗರ ವರ ಕುಟುಂಬ ಸದಸ್ಯರು ಹಶೀರಾಪುರ್ ಜಿಲ್ಲೆಯಲ್ಲಿ ಈಗ ಬೀದಿ ಬದಿಯಲ್ಲಿ ವಾಸಿಸುತ್ತಿದ್ದಾರೆ. ಶಾಸಕರ ಕುಟುಂಬದವರು ಇಲ್ಲಿಯವರೆಗೆ ಘರ್‍ಶಂಕರ್ ನಗರದ ಸರ್ಕಾರಿ ನಿವಾಸದಲ್ಲಿ ವಾಸವಾಗಿದ್ದರು. ಈ ನಿವಾಸದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಕಾರಣ ಶಾಸಕರ ಕುಟುಂಬವನ್ನು ಕಳೆದ ಭಾನುವಾರ ಸರ್ಕಾರ ತೆರವುಗೊಳಿಸಿತ್ತು.

1992, 1997ರಲ್ಲಿ ಇವರು ಘರ್‍ಶಂಕರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾಧಿಕಾರಿಯವರ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಸಹಾಯದಿಂದಾಗಿ ಮನೆಯನ್ನು ತೆರವುಗೊಳಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ಶಾಸಕನಾಗಿದ್ದಕ್ಕೆ ನನಗೆ ತಿಂಗಳಿಗೆ 20,000 ಪಿಂಚಣಿ ಬರುತ್ತಿದೆ. ಆ  ಹಣದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಬಾಡಿಗೆ ಮನೆ ಸಿಗುವವರೆಗೆ ಬೀದಿಯಲ್ಲೇ ವಾಸ ಮಾಡುತ್ತೇನೆ. ಶಾಸಕನಾಗಿದ್ದ ಸಂದರ್ಬ ನನಗಾಗಿ ಯಾವುದೇ ಹಣವನ್ನು ಉಳಿಸಿಕೊಂಡಿಲ್ಲ. ಬಡವರ ಏಳಿಗೆಗಾಗಿ ದುಡಿದ್ದೇನೆ ಎಂದು ಶಿಂಗಾರ ರಾಮ್ ಶಹುಂಗರ ಹೇಳಿದರು.