ರಾಜ್ಯ ಮತ್ತು ಜಿಲ್ಲೆ ಮಟ್ಟದ ಅಧಿಕಾರಿಗಳನ್ನು 'ಫೀಲ್ಡ್ ಕಮಾಂಡರ್ಸ್' ಎಂದ ಪ್ರಧಾನಿ ಮೋದಿ

ರಾಜ್ಯ ಮತ್ತು ಜಿಲ್ಲೆ ಮಟ್ಟದ ಅಧಿಕಾರಿಗಳನ್ನು 'ಫೀಲ್ಡ್ ಕಮಾಂಡರ್ಸ್' ಎಂದ ಪ್ರಧಾನಿ ಮೋದಿ

Ms   ¦    May 18, 2021 07:01:00 PM (IST)
ರಾಜ್ಯ ಮತ್ತು ಜಿಲ್ಲೆ ಮಟ್ಟದ ಅಧಿಕಾರಿಗಳನ್ನು 'ಫೀಲ್ಡ್ ಕಮಾಂಡರ್ಸ್' ಎಂದ ಪ್ರಧಾನಿ ಮೋದಿ

ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ 'ಫೀಲ್ಡ್ ಕಮಾಂಡರ್ಸ್' ಎಂದು ರಾಜ್ಯ ಮತ್ತು ಜಿಲ್ಲೆ ಮಟ್ಟದ ಅಧಿಕಾರಿಗಳನ್ನು ಪ್ರಧಾನಿ ಮೋದಿ ಗುರುತಿಸಿದ್ದು, ಸ್ಥಳೀಯ ಕಂಟೈನ್ ಮೆಂಟ್ ವಲಯಗಳು, ತ್ವರಿತಗತಿಯಲ್ಲಿ ಪರೀಕ್ಷೆ ಮತ್ತು ಜನರೊಂದಿಗೆ ಸರಿಯಾದ ಮತ್ತು ಸಂಪೂರ್ಣ ಮಾಹಿತಿ ಸಾಂಕ್ರಾಮಿಕ ಸೋಲಿಸಲು ಇರುವ ಶಸಾಸ್ತ್ರಗಳು ಎಂದಿದ್ದಾರೆ.

9 ರಾಜ್ಯಗಳ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ, ತಮ್ಮ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ವಿಧಾನ ಅನುಸರಿಸಲು ಅವರು ಮುಕ್ತರಾಗಿರುತ್ತಾರೆ. ನೀತಿಯಲ್ಲಿ ಯಾವುದೇ ಬದಲಾವಣೆ ಬಗ್ಗೆ ಯಾವುದೇ ಪ್ರತಿಬಂಧವಿಲ್ಲದೆ ಮುಕ್ತವಾಗಿ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವಂತೆ ಸೂಚಿಸಿದರು.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಲಸಿಕೆ ಬಲವಾದ ಮಾರ್ಗವಾಗಿದೆ ಎಂದು ಪ್ರತಿಪಾದಿಸಿದ ಮೋದಿ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಒಟ್ಟಾಗಿ ಹೋಗಲಾಡಿಸಬೇಕಾಗಿದೆ.