ಕೊರೊನಾ ಸೋಂಕುಗೆ ಚೀನಾದಲ್ಲಿ ಮೃತರ ಸಂಖ್ಯೆ 2,345ಕ್ಕೆ ಏರಿಕೆ

ಕೊರೊನಾ ಸೋಂಕುಗೆ ಚೀನಾದಲ್ಲಿ ಮೃತರ ಸಂಖ್ಯೆ 2,345ಕ್ಕೆ ಏರಿಕೆ

YK   ¦    Feb 22, 2020 12:18:08 PM (IST)
ಕೊರೊನಾ ಸೋಂಕುಗೆ ಚೀನಾದಲ್ಲಿ ಮೃತರ ಸಂಖ್ಯೆ 2,345ಕ್ಕೆ ಏರಿಕೆ

ಬೀಜಿಂಗ್: ಭಯಾನಕ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದುವರೆಗೆ ಮೃತಪಟ್ಟವರ ಸಂಖ್ಯೆ 2,345 ಕ್ಕೆ ಏರಿಕೆಯಾಗಿದೆ.

76, 288ಜನರಿಗೆ ಈ ಸೋಂಕು ತಗುಲಿದೆ. ರಾಷ್ಟ್ರೀಯ ಆಯೋಗ ಶನಿವಾರ ನೀಡಿದ ಮಾಹಿತಿ ಪ್ರಕಾರ ಹುಬೆ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿ ವರದಿಯಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಕೊರೊನಾ ವೈರಸ್ ಸೋಂಕು ಮೊದಲಿಗೆ ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡಿತು. ಪ್ರಪಂಚದ ಇತರೆ 20ಕ್ಕೂ ಅಧಿಕ ರಾಷ್ಟ್ರಗಳಿಗೆಸೋಂಕು ವ್ಯಾಪಿಸಿದೆ ಎಂದು ತಿಳಿದು ಬಂದಿದೆ.