ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವ: ಯಾತ್ರಾರ್ಥಿಗಳಲ್ಲಿ ಭೀತಿ

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವ: ಯಾತ್ರಾರ್ಥಿಗಳಲ್ಲಿ ಭೀತಿ

May 31, 2016 02:55:43 PM (IST)

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಸೋಮವಾರ ಸ್ವಲ್ಪಮಟ್ಟಿಗೆ ತನ್ನ ಆರ್ಭಟ ನಿಲ್ಲಿಸಿದೆಯಾದರೂ ಮತ್ತೆ ಮೇಘಸ್ಫೋಟ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಎಚ್ಚರಿಕೆ ನೀಡಿದೆ.

ಭಾನುವಾರ ಸುರಿದ ಮಳೆಗೆ ಥೇರಿಯಿಂದ ಕೇದಾರನಾಥಕ್ಕೆ ಹೋಗುವ ಹೆದ್ದಾರಿಯನ್ನೂ ಬಂದ್ ಮಾಡಲಾಗಿತ್ತು.  ಸೋಮವಾರ ವರುಣನ ಆರ್ಭಟ ಕೊಂಚ ಕಡಿಮೆಯಾಗಿದ್ದು, ಥೇರಿ ಮತ್ತು ಚಮೋಲಿ ಪ್ರದೇಶಗಳಿಂದ ಯಾತ್ರಿಕರು ಕೇದಾರನಾಥಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಚಾರ್ ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಲ್ಲಿ ಭೀತಿ ಉಂಟುಮಾಡಿದೆ. ಭಾರಿ ಮಳೆಯಿಂದಾಗಿ ಚಾರ್ ಧಾಮ್ ಯಾತ್ರೆಯ ಕಣಿವೆಗಳಲ್ಲಿ ಭೂಕುಸಿತ ಉಂಟಾಗಿದ್ದು ಇಲ್ಲಿದ್ದ ವಿವಿಧ ಮೊಬೈಲ್ ಸೇವಾ ಸಂಸ್ಥೆಯ ನೆಟ್ ವರ್ಕ್ ಟವರ್ ಗಳು ಹಾನಿಗೀಡಾಗಿವೆ.