ಮಧ್ಯ ಪ್ರದೇಶದಲ್ಲಿ ಪೊಲೀಸ್ ತರಬೇತಿ ಕೇಂದ್ರೀಯ ಅಕಾಡೆಮಿ ಕಟ್ಟಡ ಕುಸಿತ: ಓರ್ವ ಸಾವು

ಮಧ್ಯ ಪ್ರದೇಶದಲ್ಲಿ ಪೊಲೀಸ್ ತರಬೇತಿ ಕೇಂದ್ರೀಯ ಅಕಾಡೆಮಿ ಕಟ್ಟಡ ಕುಸಿತ: ಓರ್ವ ಸಾವು

Mar 10, 2017 11:56:19 AM (IST)

ಭೋಪಾಲ್: ನಿರ್ಮಾಣ ಹಂತದ ಪೊಲೀಸ್ ತರಬೇತಿ ಕೇಂದ್ರೀಯ ಅಕಾಡೆಮಿ ಕಟ್ಟಡ ಕುಸಿದ ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟು 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶದ ಭೋಪಾಲ್ ನ ಬಿಲ್ಖಿರಿಯಾ ಪ್ರದೇಶದಲ್ಲಿದ್ದ ನಿರ್ಮಿಸಲಾಗುತ್ತಿರುವ ಕಟ್ಟಡ ಕಳೆದ ರಾತ್ರಿ ಕುಸಿದಿದ್ದು, ಪರಿಣಾಮ ಕಟ್ಟಡದ ಕೆಳಗೆ ಇದ್ದವರ ಪೈಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಂತೆಯೇ ಇತರೆ 16 ಮಂದಿ  ಗಾಯಗೊಂಡಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ  ನಡೆಸುತ್ತಿದ್ದಾರೆ.