'ಜಗತ್ತಿನ ಶ್ರೀಮಂತ ದೇವರಿಗೆ' ಕಳೆದ ವರ್ಷ ಬಂದ ಕಾಣಿಕೆ ಬರೋಬ್ಬರಿ 1018 ಕೋಟಿ ರೂ...

'ಜಗತ್ತಿನ ಶ್ರೀಮಂತ ದೇವರಿಗೆ' ಕಳೆದ ವರ್ಷ ಬಂದ ಕಾಣಿಕೆ ಬರೋಬ್ಬರಿ 1018 ಕೋಟಿ ರೂ...

Jan 08, 2017 01:31:43 PM (IST)

ತಿರುಪತಿ:  ಕಳೆದ ವರ್ಷ ಭಾರಿ ಪ್ರಮಾಣದ ನಗದು ಹಾಗೂ ಚಿನ್ನ ರೂಪದ ಕಾಣಿಕೆ, ದೇಣಿಗೆ, ಜಗತ್ತಿನ ಶ್ರೀಮಂತರ ದೇವರು ಎಂದೇ ಖ್ಯಾತಿ ಪಡೆದ ತಿರುಪತಿ ವೆಂಕಟೇಶ್ವರನ ಹುಂಡಿಗೆ ಹರಿದುಬಂದಿದೆ.

ತಿರುಪತಿ ಹುಂಡಿಗೆ ಕಳೆದ ವರ್ಷ ಸುಮಾರು 1018 ಕೋಟಿ ರೂ. ನಗದು ರೂಪದ ಕಾಣಿಕೆ ಹರಿದು ಬಂದಿದ್ದು, ಸುಮಾರು 2.6 ಕೋಟಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ತಿರುಪತಿ ತಿರುಮಲ ದೇವಸ್ಥಾನ ಹೇಳಿದೆ.

2016ರಲ್ಲಿ ಸುಮಾರು 10 ಕೋಟಿ ಲಾಡು ಪ್ರಸಾದ ತಯಾರಿಸಿದ್ದು 10 ಕೋಟಿ ಲಾಡು ತಯಾರಿಸಿದ್ದು ದಾಖಲೆಯಾಗಿದ್ದು, ಜೊತೆಗೆ ತಲಾ 300ರೂ ನೀಡಿ 67.12 ಲಕ್ಷ ಭಕ್ತರು ಆನ್ ಲೈನ್ ಮೂಲಕ ದರ್ಶನದ ಟಿಕೆಟ್ ಪಡೆದುಕೊಂಡಿದ್ದು, ಇದರಿಂದ 201 ಕೋಟಿ ರೂ. ಹೆಚ್ಚುವರಿ ಆದಾಯ ದೊರೆತಿದೆ ಎಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಡಿ ಸಾಂಬಶಿವರಾವ್ ತಿಳಿಸಿದ್ದಾರೆ.