ಉಡುಪಿಯ ಮೀನಾಕ್ಷಿ ಪೂಜಾರಿ ಥಾಣೆಯಲ್ಲಿ ಮೇಯರ್ ಆಗಿ ಆಯ್ಕೆ!

ಉಡುಪಿಯ ಮೀನಾಕ್ಷಿ ಪೂಜಾರಿ ಥಾಣೆಯಲ್ಲಿ ಮೇಯರ್ ಆಗಿ ಆಯ್ಕೆ!

Mar 07, 2017 12:45:56 PM (IST)

ಮುಂಬೈ: ಮುಂಬಯಿ ಉಪನಗರದ ಥಾಣೆ ಮಹಾನಗರ ಪಾಲಿಕೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಥಾಣೆ ಅಲ್ಲಿನ ಮಾನ್ಪಾಡ ಮನೋರಮಾ ನಗರದ 3ಸಿ ವಾರ್ಡ್ ನಿಂದ ಶಿವಸೇನಾ ಪಕ್ಷದ ಅಭ್ಯರ್ಥಿಯಾಗಿದ್ದು, ಸತತ ಮೂರನೇ ಅವಧಿಗೆ ಸ್ಪರ್ಧಿಸಿ ವಿಜೇತರೆನಿಸಿದ್ದ ಉಡುಪಿ ಜಿಲ್ಲೆಯ ಕಟಪಾಡಿ ಎಣಗುಡ್ಡೆ ನಿವಾಸಿ ಮೀನಾಕ್ಷಿ ಪೂಜಾರಿ ಥಾಣೆ ಮೇಯರ್ ಆಗಿ ಸೋಮವಾರ ಆಯ್ಕೆಯಾಗಿದ್ದಾರೆ.

Udupi's Meenakshi Shinde is Thane Municipal Mayor!-1
ಇವರು ದಿ.ಗುರುವ ಕಾಂತಪ್ಪ ಪೂಜಾರಿಯವರ ಸುಪುತ್ರಿ. ಥಾಣೆ ಮಹಾನಗರ ಪಾಲಿಕೆಯ ಒಟ್ಟು 131 ಸ್ಥಾನಗಳಿಗೂ ಮತದಾನ ನಡೆದಿದ್ದು ಶಿವಸೇನೆ ಪಕ್ಷವು 67 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಎನ್ ಸಿಪಿ 34, ಬಿಜೆಪಿ 23, ಕಾಂಗ್ರೆಸ್ 03, ಪಕ್ಷೇತರರು 04 ಸ್ಥಾನಗಳನ್ನು ಪಡೆದಿದ್ದವು. ಈ ವಾರ್ಡ್ ನಿಂದ ಈ ಬಾರಿ ಬಿಜೆಪಿ, ಕಾಂಗ್ರೆಸ್, ಎನ್ ಸಿಪಿ, ಎಂಎನ್ ಎಸ್ ಸೇರಿದಂತೆ ಐದು ಪಕ್ಷಗಳ ಅಭ್ಯರ್ಥಿಗಳಷ್ಟೇ ಸ್ಪರ್ಧಿಸಿ ಪಂಚಕೋನ ಸ್ಪರ್ಧೆ ಏರ್ಪಾಡಿಸಿತ್ತು. ಈ ಪೈಕಿ ಮೀನಾಕ್ಷಿ ಪೂಜಾರಿ ದಾಖಲೆ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು.

ಮಾರ್ಚ್ 2ರಂದು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ಮೀನಾಕ್ಷಿ ಪೂಜಾರಿ ಅಂದೇ ಮೇಯರ್ ಸ್ಥಾನಕ್ಕೆ ಆಯ್ಕೆ ಆಗಿದ್ದರೂ ಚುನಾವಣಾ ಆಯೋಗದ ನಿಯಮಾನುಸಾರ ಅಧಿಕೃತವಾಗಿ ಇಂದಿಲ್ಲಿ ಮೀನಾಕ್ಷಿ ಅವರನ್ನು ಥಾಣೆ ಮೇಯರ್ ಎಂದು ಪ್ರಕಟಿಸಿತ್ತು.