ದೇಶದಲ್ಲಿ ಒಂದೇ ದಿನ 4 ಲಕ್ಷ ಮಂದಿ ಕೊರೊನಾ ಸೋಂಕಿತರು ಚೇತರಿಕೆ

ದೇಶದಲ್ಲಿ ಒಂದೇ ದಿನ 4 ಲಕ್ಷ ಮಂದಿ ಕೊರೊನಾ ಸೋಂಕಿತರು ಚೇತರಿಕೆ

May 19, 2021 07:29:47 AM (IST)
ದೇಶದಲ್ಲಿ   ಒಂದೇ ದಿನ 4 ಲಕ್ಷ ಮಂದಿ ಕೊರೊನಾ ಸೋಂಕಿತರು ಚೇತರಿಕೆ

ನವದೆಹಲಿ, : ದೇಶದಲ್ಲಿ ಮೊದಲ ಬಾರಿಗೆ ಒಂದೇ ದಿನ 4 ಲಕ್ಷ ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.ಕಳೆದ 24 ಗಂಟೆಗಳಲ್ಲಿ 4,22,436 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ, ಕಳೆದ 14 ದಿನಗಳಲ್ಲಿ 3,55,944ಕ್ಕೂ ಅಧಿಕ ಸರಾಸರಿ ದೈನಂದಿನ ಚೇತರಿಕೆ ಪ್ರಕರಣಗಳು ದಾಖಲಾಗಿವೆ.ಕಳೆದ 24 ಗಂಟೆಗಳಲ್ಲಿ 2,63,533 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಇದುವರೆಗೂ ನೀಡಲಾದ ಒಟ್ಟಾರೆ ಡೋಸ್‌ಗಳಲ್ಲಿ 66.70%ರಷ್ಟನ್ನು ಹತ್ತು ರಾಜ್ಯಗಳಲ್ಲಿ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 18-44 ವರ್ಷ ವಯೋಮಾನದ 6,69,884 ಫಲಾನುಭವಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಮತ್ತು 3ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆಯ ಸಿಕ್ಕಾಗಿನಿಂದಲೂ ಇದುವರೆಗೂ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವಯೋಮಾನದ ಒಟ್ಟು 59,39,290 ಫಲಾನುಭವಿಗಳು ಲಸಿಕೆಯ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಕೆಳಗಿನ ನಕ್ಷೆಯು ಕಳೆದ 14 ದಿನಗಳ ದೈನಂದಿನ ಚೇತರಿಕೆಯನ್ನು ವಿವರಿಸುತ್ತದೆ.
ಲಸಿಕೆ ಅಭಿಯಾನದ 122ನೇ ದಿನದಂದು (ಮೇ 17, 2021) 15,10,418 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. 14,447 ಸೆಷನ್‌ಗಳಲ್ಲಿ, 12,67,201 ಫಲಾನುಭವಿಗಳಿಗೆ 1ನೇ ಡೋಸ್ ಲಸಿಕೆ ನೀಡಲಾಯಿತು ಮತ್ತು 2,43,217 ಫಲಾನುಭವಿಗಳು ತಮ್ಮ 2ನೇ ಡೋಸ್ ಲಸಿಕೆಯನ್ನು ಪಡೆದುಕೊಂಡರು.ಕಳೆದ 24 ಗಂಟೆಗಳಲ್ಲಿ ಹತ್ತು ರಾಜ್ಯಗಳಲ್ಲಿ 74.54% ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಅಂದರೆ, 38,603 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ. 33,075 ಹೊಸ ಪ್ರಕರಣಗಳೊಂದಿಗೆ ತಮಿಳುನಾಡು ನಂತರದ ಸ್ಥಾನದಲ್ಲಿದೆ.
ಈಗ ಸತತ ಎರಡನೇ ದಿನ 3 ಲಕ್ಷಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ 1,63,232 ಪ್ರಕರಣಗಳ ನಿವ್ವಳ ಕುಸಿತ ದಾಖಲಾಗಿದೆ.ಭಾರತದ ಒಟ್ಟಾರೆ ಚೇತರಿಕೆ ಪ್ರಕರಣಗಳ ಸಂಖ್ಯೆ ಇಂದು 2,15,96,512 ಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆ ದರವು ಮತ್ತಷ್ಟು ಸುಧಾರಿಸಿ ಶೇ. 85. 60ಕ್ಕೆ ತಲುಪಿದೆ. ಚೇತರಿಕೆ ಪ್ರಕರಣಗಳಲ್ಲಿ ಹತ್ತು ರಾಜ್ಯಗಳು 75.77% ರಷ್ಟು ಪಾಲು ಹೊಂದಿವೆ.
ಮತ್ತೊಂದೆಡೆ, ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆ ಇಂದು 33,53,765ಕ್ಕೆ ಇಳಿಕೆಯಾಗಿದೆ. ಇದು ಪ್ರಸ್ತುತ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳ ಶೇ. 13.29ರಷ್ಟಿದೆ. ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 8 ರಾಜ್ಯಗಳ ಒಟ್ಟು ಪಾಲು ಶೇ. 69.01% ರಷ್ಟಿದೆ.