ಅಹ್ಮದಾಬಾದ್: ಟ್ರಂಪ್ ಸ್ವಾಗತಕ್ಕೆ ನಿರ್ಮಿಸಲಾಗಿದ್ದ ಗೇಟ್ ಕುಸಿತ

ಅಹ್ಮದಾಬಾದ್: ಟ್ರಂಪ್ ಸ್ವಾಗತಕ್ಕೆ ನಿರ್ಮಿಸಲಾಗಿದ್ದ ಗೇಟ್ ಕುಸಿತ

YK   ¦    Feb 23, 2020 04:54:47 PM (IST)
ಅಹ್ಮದಾಬಾದ್: ಟ್ರಂಪ್ ಸ್ವಾಗತಕ್ಕೆ ನಿರ್ಮಿಸಲಾಗಿದ್ದ ಗೇಟ್ ಕುಸಿತ

ಅಹ್ಮದಾಬಾದ್: ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರಾ ಸ್ಟೇಡಿಯ ಸಮೀಪ ಟ್ರಂಪ್ ಸ್ವಾಗತಕ್ಕೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಗೇಟ್‌ವೊಂದು ಕುಸಿದುಬಿದ್ದಿರುವ ಘಟನೆ ಭಾನುವಾರ ನಡೆದಿದೆ.

ಸೋಮವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ರಾಜಧಾನಿ ಅಹ್ಮದಾಬಾದ್‌ಗೆ ಭೇಟಿ ನೀಡಲಿದ್ದಾರೆ.

‘ನಮಸ್ತೆ ಟ್ರಂಪ್’ಕಾರ್ಯಕ್ರಮಕ್ಕೆ ಎಲ್ಲ ತಯಾರಿಗಳು ಅಂತಿಮ ಹಂತದಲ್ಲಿದ್ದಾಗ ಈ ಘಟನೆ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಟ್ರಂಪ್ ಫೆ.24ರಂದು ಜಂಟಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತಾತ್ಕಾಲಿಕ ಗೇಟ್‌ಗೆ ಜೋರಾದ ಗಾಳಿಯನ್ನು ತಡೆಯುವಷ್ಟು ಸಾಮರ್ಥ್ಯ ಇಲ್ಲ ಎನ್ನುವುದನ್ನು ಗೇಟ್ ಕುಸಿದುಬಿದ್ದಿರುವ ವೀಡಿಯೊದಿಂದ ಸಾಬೀತಾಗಿದೆ. ಅದೃಷ್ಟವಶಾತ್ ಗೇಟ್ ಕುಸಿತ ಘಟನೆಯಿಂದ ಯಾವುದೇ ಸಾವು-ನೋವು ಉಂಟಾಗಿಲ್ಲ.