ಮೋದಿ ತಪ್ಪು ಹುಡುಕಬಲ್ಲೆ, ಪ್ರಧಾನಿಗೆ ಅಗೌರವ ತೋರಿಸಲ್ಲವೆಂದ ರಾಹುಲ್

ಮೋದಿ ತಪ್ಪು ಹುಡುಕಬಲ್ಲೆ, ಪ್ರಧಾನಿಗೆ ಅಗೌರವ ತೋರಿಸಲ್ಲವೆಂದ ರಾಹುಲ್

Nov 12, 2017 02:39:45 PM (IST)
ಮೋದಿ ತಪ್ಪು ಹುಡುಕಬಲ್ಲೆ, ಪ್ರಧಾನಿಗೆ ಅಗೌರವ ತೋರಿಸಲ್ಲವೆಂದ ರಾಹುಲ್

ಬನಸ್ಕಾಂತಾ: ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇರುವಂತಹ ಕೆಲವು ತಪ್ಪುಗಳನ್ನು ಹುಡುಕಿ ನಾನು ಹೇಳುತ್ತೇನೆ. ಆದರೆ ಅವರ ಪದವಿಗೆ ಎಂದೂ ನಾನು ಅಗೌರವ ತೋರಿಸುವುದಿಲ್ಲವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಇಲ್ಲಿ ಚುನಾವಣಾ ಪೂರ್ವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಹಿಂದೆ ಮೋದಿ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಪ್ರಧಾನ ಮಂತ್ರಿಗಳ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದರು. ನಮ್ಮ ಮತ್ತು ಅವರ ನಡುವೆ ಇರುವ ವ್ಯತ್ಯಾಸವಿದು. ನಮ್ಮ ಬಗ್ಗೆ ಮೋದಿ ಏನು ಹೇಳಿದರೂ ಪರವಾಗಿಲ್ಲ. ಆದರೆ ನಾವು ಇದನ್ನೆಲ್ಲ ಮೀರಿ ಮುನ್ನಡೆಯಲಿದ್ದೇವೆ ಎಂದರು.

ಮೋದಿ ಅವರನ್ನು ಟೀಕಿಸಿದ ರಾಹುಲ್, ನಾವು ಸತ್ಯವನ್ನೇ ಮಾತನಾಡುತ್ತೇವೆ. ಗುಜರಾತ್ ನಲ್ಲಿ ಅಭಿವೃದ್ಧಿಗೆ ಹುಚ್ಚು ಹಿಡಿದಿದೆ ಎಂದು ಹೇಳಿದರು.

ಟ್ವಿಟ್ಟರ್ ನಲ್ಲಿ ಬರುತ್ತಿರುವ ರಾಜಕೀಯ ಟ್ವೀಟ್ ಗಳು ತನ್ನದೇ ಎಂದು ಸ್ಪಷ್ಟಪಡಿಸಿದ ರಾಹುಲ್, ನಾನು ಇದರ ಬಗ್ಗೆ ಮೂರು ನಾಲ್ಕು ಮಂದಿಯೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.