ದುರ್ಬಲ ವರ್ಗಕ್ಕೆ ನೆರವು ನೀಡಿ ನಂತರ ಲಾಕ್ ಡೌನ್ ಮಾಡಿ: ರಾಹುಲ್ ಗಾಂಧಿ

ದುರ್ಬಲ ವರ್ಗಕ್ಕೆ ನೆರವು ನೀಡಿ ನಂತರ ಲಾಕ್ ಡೌನ್ ಮಾಡಿ: ರಾಹುಲ್ ಗಾಂಧಿ

Jayashree Aryapu   ¦    May 04, 2021 05:15:18 PM (IST)
ದುರ್ಬಲ ವರ್ಗಕ್ಕೆ ನೆರವು ನೀಡಿ ನಂತರ ಲಾಕ್ ಡೌನ್ ಮಾಡಿ: ರಾಹುಲ್ ಗಾಂಧಿ

ನವದೆಹಲಿ: ದೇಶದಿಂದ ಕೊರೊನಾ ಸೋಂಕು ಹೋಗಲಾಡಿಸಬೇಕಾದರೆ ದುರ್ಬಲ ವರ್ಗದವರಿಗೆ ಕನಿಷ್ಠ ಆದಾಯ ಗ್ಯಾರಂಟಿ ಯೋಜನೆ ಸೌಲಭ್ಯ ಕಲ್ಪಿಸಿ ಲಾಕ್‍ಡೌನ್ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕು ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿರುವುದರಿಂದಲೇ, ಈಗಾಗಲೇ ಹಲವಾರು ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ರಾಹುಲ್ ಟ್ವಿಟರ್ ನಲ್ಲಿ ದೂರಿದ್ದಾರೆ.

ದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡು ಸೋಂಕು ನಿವಾರಣೆಗೆ ಪ್ರಯತ್ನಿಸಬೇಕು. ಆದರೆ, ದುರ್ಬಲ ವರ್ಗದವರಿಗೆ ಕನಿಷ್ಠ ಹಣಕಾಸಿನ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.