ಮಹಾರಾಷ್ಟ್ರದಲ್ಲಿ ಲಕ್ಡೌನ್ ಭೀತಿ

ಮಹಾರಾಷ್ಟ್ರದಲ್ಲಿ ಲಕ್ಡೌನ್ ಭೀತಿ

Jayashree Aryapu   ¦    Apr 07, 2021 05:04:59 PM (IST)
ಮಹಾರಾಷ್ಟ್ರದಲ್ಲಿ ಲಕ್ಡೌನ್ ಭೀತಿ

ಮಹಾರಾಷ್ಟ್ರ: ಮಹಾರಾಷ್ಟ್ರದ ಹೊಸ ಕೋವಿಡ್ 19 ನಿರ್ಬಂಧದ ಪ್ರಕಾರ ಏಪ್ರಿಲ್ 30 ರವರೆಗೆ ಅನಿವಾರ್ಯವಿಲ್ಲದ ವ್ಯವಹಾರಗಳನ್ನು ಬಂದ್ ಮಾಡಿದೆ. ಈ ನಿಟ್ಟಿನಲ್ಲಿ, ಮಹಾರಾಷ್ಟ್ರದಲ್ಲಿ ನೆಲೆಯಾಗಿದ್ದ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಲು, ಮಹಾರಾಷ್ಟ್ರದ ಲೋಕಮಾನ್ಯ ತಿಲಕ್ ನಿಲ್ದಾಣ ಹಾಗೂ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಲ್ಲಿ ಟಿಕೇಟ್ ಖರೀದಿಗೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

'ಯುಪಿ, ಬಿಹಾರಕ್ಕೆ ಪಯಾನಿಸುವರು ಗೊಂದಲಕ್ಕೆ ಒಳಗಾಗಿದ್ದರು. ಮೊದಲೇ ಟಿಕೇಟ್ ಕಯ್ದಿರಿಸಿಕೊಳ್ಳಲು ಮಾಹಿತಿ ನೀಡಿದೆ' ಎಂದು ಎಲ್ ಟಿ ಟಿ ಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಈ ಸಂದರ್ಭ ಕೇಂದ್ರ ರೈಲ್ವೇ ಅಧಿಕಾರಿ, ಉತ್ತರಪ್ರದೇಶ ಮತ್ತು ಬಿಹಾರ್ ಗೆ ತೆರಳುವ ರೈಲುಗಳು ಈಗಾಗಲೇ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ' ಎಂದರು.

ಈ ಬಗ್ಗೆ ಒಂದಷ್ಟು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಬಿಹಾರದ ಗುಂಪೊಂದು ರೈಲ್ವೇ ನಿಲ್ದಾಣ ತಲುಪಿತ್ತು. ಆದರೆ ಕೌಂಟರ್ ಮುಚ್ಚಿದ್ದನ್ನು ನೋಡಿ ಚಿಂತಾಜನಕರಾಗ್ಗಿದ್ದಾರೆ. ಇದರಿಂದ ತಮ್ಮ ಒಂದು ದಿನದ ರಾತ್ರಿಯನ್ನು ರೈಲ್ವೇ ನಿಲ್ದಾಣದಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ ಒದಗಿ ಬಂತು ಎಂದು ತಿಳಿಸಿದ್ದಾರೆ.