ಕೊವಿಡ್-19ನಿಂದ ಹೊರಬರಲು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್

ಕೊವಿಡ್-19ನಿಂದ ಹೊರಬರಲು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್

HSA   ¦    May 12, 2020 08:51:16 PM (IST)
ಕೊವಿಡ್-19ನಿಂದ ಹೊರಬರಲು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್

ನವದೆಹಲಿ: ಕೊವಿಡ್-19ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಂತಹ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮೇ12) 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದಾರೆ.

ಇದು ಬಡ, ಮಧ್ಯಮ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ನೆರವಾಗಲಿದ್ದು, ಇದರ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಿದ್ದಾರೆ ಎಂದು ಪ್ರಧಾನಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಕೊವಿಡ್-19 ವಿರುದ್ಧ ಹೋರಾಡಲು ದೇಶವು ಸ್ವಾವಲಂಬಿಯಾಗಿ ಹೋರಾಡಬೇಕಾಗಿದೆ. ಹೀಗಾಗಿ ದೇಶವು ಸ್ವದೇಶಿ ವಸ್ತುಗಳನ್ನು ಖರೀದಿ ಮಾಡಿ ಇಲ್ಲಿನ ಉದ್ಯೋಗಿಗಳಿಗೆ ನೆರವಾಗಬೇಕು. ಇಷ್ಟು ಮಾತ್ರವಲ್ಲದೆ ಸ್ಥಳೀಯ ವಸ್ತುಗಳ ಬಗ್ಗೆ ಪ್ರಚಾರ ಕೂಡ ಮಾಬಡೇಕು ಎಂದು ಅವರು ತಿಳಿಸಿದರು.

ಕೊವಿಡ್-19 ಬರುವ ಮೊದಲು ಒಂದೇ ಒಂದು ಪಿಪಿಪಿ ಕಿಟ್ ಭಾರತದಲ್ಲಿ ಉತ್ಪಾದನೆ ಆಗುತ್ತಿರಲಿಲ್ಲ ಮತ್ತು ಎನ್ 95 ಮಾಸ್ಕ್ ಕೂಡ ಸ್ವಲ್ಪ ಪ್ರಮಾಣದಲ್ಲಿ ಇತ್ತು. ಆದರೆ ಇಂದು ದಿನಕ್ಕೆ 2 ಲಕ್ಷದಷ್ಟು ಪಿಪಿಪಿ ಕಿಟ್ ಉತ್ಪಾದನೆ ಆಗುತ್ತಿದೆ ಎಂದರು.

ಇದರಿಂದ ಭಾರತವು ಇಂತಹ ಸಂಕಷ್ಟದ ಸಮಯದಲ್ಲಿ ಸ್ವಾವಲಂಬಿಯಾಗಿ ಬದುಕಬೇಕಾಗಿದೆ. ಇದಕ್ಕೆ ಜನರು ಕೂಡ ಸಹಕಾರ ನೀಡಬೇಕು ಎಂದ ಮೋದಿ ಅವರು ಮೇ 17ರ ಬಳಿಕ ಹೊಸ ರೀತಿಯಲ್ಲಿ ಲಾಕ್ ಡೌನ್ ಮುಂದುವರಿಯಲಿದೆ ಎನ್ನುವ ಸೂಚನೆ ನೀಡಿದರು.