ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ದೇಶಕ್ಕೆ 'ಅಚ್ಛೇ ದಿನ್‌'!: ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ದೇಶಕ್ಕೆ 'ಅಚ್ಛೇ ದಿನ್‌'!: ರಾಹುಲ್ ಗಾಂಧಿ

Jan 11, 2017 02:21:26 PM (IST)

ಹೊಸದಿಲ್ಲಿ: 'ಜನ್‌ ವೇದನಾ' ಎಂಬ ಹೆಸರಿನಲ್ಲಿ  ಕಾಂಗ್ರೆಸ್‌ ಪಕ್ಷ  ಬೃಹತ್‌ ರ್ಯಾಲಿ ಆಯೋಜಿಸಿ ನೋಟ್ ಬ್ಯಾನ್ ವಿರುದ್ಧ ಬುಧವಾರ ದೆಹಲಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿತು.

ಈ ಸಂದರ್ಭ ಪ್ರಧಾನಿ ಮೋದಿ ಮತ್ತು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ನಮ್ಮ ಪ್ರಧಾನಿಗೆ ಮತ್ತು ಬಿಜೆಪಿಗೆ 70 ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ಏನು ಮಾಡಿದೆ ಎಂದು ಕೇಳುವ ಹವ್ಯಾಸ ಇದೆ. ನಾವು ಏನು ಮಾಡಿದ್ದೇವೆ ಎಂದು ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.

ದೇಶದ ಜನ 'ಅಚ್ಛೇ ದಿನ್‌'ಗಾಗಿ ಎದುರು ನೋಡುತ್ತಿದ್ದು, ಅವರಿಗೆ ನಾನು ಭರವಸೆ ನೀಡುತ್ತೇನೆ. ಕಾಂಗ್ರೆಸ್‌ ಸರಕಾರ ಮತ್ತೆ ಅಧಿಕಾರಕ್ಕೆ ಬಂದಾಗ ಮಾತ್ರ ದೇಶಕ್ಕೆ 'ಅಚ್ಛೇ ದಿನ್' ಬರುತ್ತದೆ ಎಂದ ಅವರು, ನಾವು 16 ವರ್ಷ ಕೆಳಕ್ಕೆ ಹೋಗಿದ್ದೇವೆ. ಆಟೋ ಮೊಬೈಲ್‌ ಕ್ಷೇತ್ರದಲ್ಲಿ ಮಾರಾಟ 60% ಕುಸಿದಿದ್ದು, ಆರ್‌ಬಿಐ ನಂತಹ ಸಂಸ್ಥೆಗಳನ್ನು ಮೋದಿ ಮತ್ತು ಆರ್‌ಎಸ್‌ಎಸ್‌ ದುರ್ಬಲಗೊಳಿಸಿದೆ. ಮಾತ್ರವಲ್ಲ ಭಾರತದ ಪ್ರಧಾನ ಮಂತ್ರಿಯೊಬ್ಬರು ಇದೇ ಮೊದಲ ಬಾರಿಗೆ ನೋಟ್ ಬ್ಯಾನ್ ಮಾಡುವ ಮೂಲಕ ವಿಶ್ವದಾದ್ಯಂತ ಅಪಹಾಸ್ಯಕ್ಕೊಳಗಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.