ವಿದ್ಯಾರ್ಥಿನಿಯರ ಶಾಲಾ ವಸತಿ ನಿಲಯಕ್ಕೆ ಆಕಸ್ಮಿಕ ಬೆಂಕಿ: 17 ಬಾಲಕಿಯರು ಸಜೀವ ದಹನ

ವಿದ್ಯಾರ್ಥಿನಿಯರ ಶಾಲಾ ವಸತಿ ನಿಲಯಕ್ಕೆ ಆಕಸ್ಮಿಕ ಬೆಂಕಿ: 17 ಬಾಲಕಿಯರು ಸಜೀವ ದಹನ

May 23, 2016 11:53:45 AM (IST)

ಬ್ಯಾಂಕಾಕ್: ವಿದ್ಯಾರ್ಥಿನಿಯರ ಶಾಲಾ ವಸತಿ ನಿಲಯಕ್ಕೆ ಆಕಸ್ಮಿಕ ಬೆಂಕಿ ತಗುಲಿ 17 ಬಾಲಕಿಯರು ಸಜೀವ ದಹನಗೊಂಡಿರುವ ಘಟನೆ ಉತ್ತರ ಥೈಲ್ಯಾಂಡ್‌ನಲ್ಲಿ ಭಾನುವಾಋ ಸಂಭವಿಸಿದೆ.

ಶಾಲೆ ಇರುವ ಸ್ಥಳದಲ್ಲಿ ರೆಸಾರ್ಟ್‌ನಲ್ಲಿ ಮಾದಕ ದ್ರವ್ಯಗಳ ಬಳಕೆ ನಡೆಯುತ್ತಿದ್ದು, ಇಲ್ಲಿಯ ಕಳ್ಳ ಸಾಗಣೆ ಮಾಫಿಯಾ  ಹಾವಳಿ ಹೆಚ್ಚಿದೆ. ಅಗ್ನಿ ಅವಘಡದ ಹಿಂದೆ ಈ ಮಾಫಿಯಾದ ಕೈವಾಡವಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲ.  ಈ ದುರ್ಘಟನೆಯಿಂದ 17 ಬಾಲಕಿಯರು ಸಜೀವ ದಹನಗೊಂಡಿದ್ದು,  ಐವರು ವಿದ್ಯಾರ್ಥಿನಿಯರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಅವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.