ಎಫ್ ಎಟಿಎಫ್ ಕ್ರಮದಿಂದ ಜಮ್ಮುಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ತಗ್ಗಿದೆ: ಸೇನಾ ಮುಖ್ಯಸ್ಥ

ಎಫ್ ಎಟಿಎಫ್ ಕ್ರಮದಿಂದ ಜಮ್ಮುಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ತಗ್ಗಿದೆ: ಸೇನಾ ಮುಖ್ಯಸ್ಥ

HSA   ¦    Feb 20, 2020 05:05:15 PM (IST)
ಎಫ್ ಎಟಿಎಫ್ ಕ್ರಮದಿಂದ ಜಮ್ಮುಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ತಗ್ಗಿದೆ: ಸೇನಾ ಮುಖ್ಯಸ್ಥ

ನವದೆಹಲಿ: ಆರ್ಥಿಕ ಕ್ಷಿಪ್ರ ಕಾರ್ಯ ಪಡೆ(ಎಫ್ ಎಟಿಎಫ್) ಪಾಕಿಸ್ತಾನ ಮೇಲೆ ಹೇರಿರುವಂತಹ ಒತ್ತಡದಿಂದಾಗಿ ಜಮ್ಮುಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಕಡಿಮೆ ಆಗಿವೆ ಎಂದು ಸೇನಾ ಮುಖ್ಯಸ್ಥ ಎಂ ಎಂ ನರಾವನೆ ತಿಳಿಸಿದರು.

ಎಫ್ ಎಟಿಎಫ್ ಪಾಕಿಸ್ತಾನ ವಿರುದ್ಧ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಂಡರೆ ಆಗ ಪಾಕಿಸ್ತಾಣವು ತನ್ನ ನಿಲುವು ಹಾಗೂ ಚಟುವಟಿಕೆಗಳ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ. ಎಫ್ ಎಟಿಎಫ್ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಕಡಿಮೆ ಆಗಲು ಪ್ರಮುಖ ಕಾರಣವಾಗಿದೆ ಎಂದು ನರಾವನೆ ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ತಗ್ಗಿದೆ ಮತ್ತು ಸೇನೆಯು ಉಗ್ರಗಾಮಿ ಸಂಘಟನೆಗಳ ಮೇಲೆ ಅತಿಯಾಗಿ ಒತ್ತಡ ಹೇರುತ್ತಲಿದೆ ಎಂದು ಅವರು ಮಾಹಿತಿ ನೀಡಿದರು.