ಜಮ್ಮು ಕಾಶ್ಮೀರದಲ್ಲಿ ಓರ್ವ ಉಗ್ರನ ಬಂಧನ

ಜಮ್ಮು ಕಾಶ್ಮೀರದಲ್ಲಿ ಓರ್ವ ಉಗ್ರನ ಬಂಧನ

YK   ¦    Nov 25, 2017 10:15:46 AM (IST)
ಜಮ್ಮು ಕಾಶ್ಮೀರದಲ್ಲಿ ಓರ್ವ ಉಗ್ರನ ಬಂಧನ

ಶ್ರೀನಗರ: ಭಾರತೀಯ ಸೇನಾ ಪಡೆಯು ಜಮ್ಮು ಮತ್ತು ಕಾಶ್ಮೀರ ಕುಪ್ವಾರ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಓರ್ವ ಉಗ್ರನನ್ನು ಬಂಧನಕ್ಕೊಳಪಡಿಸಿದೆ.

ಇಲ್ಲಿನ ಮಗಮ್ ಎಂಬಲ್ಲಿ ಸೇನಾಪಡೆ ಹಾಗೂ ಜಮ್ಮು, ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತ ಉಗ್ರ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವನಾಗಿದ್ದಾನೆ. ಉಗ್ರನನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.