ಕೊವಿಡ್-19ಗೆ ತಮಿಳುನಾಡಿನಲ್ಲಿ ಓರ್ವ ಮೃತ್ಯು

ಕೊವಿಡ್-19ಗೆ ತಮಿಳುನಾಡಿನಲ್ಲಿ ಓರ್ವ ಮೃತ್ಯು

HSA   ¦    Mar 25, 2020 12:20:58 PM (IST)
ಕೊವಿಡ್-19ಗೆ ತಮಿಳುನಾಡಿನಲ್ಲಿ ಓರ್ವ ಮೃತ್ಯು

ನವದೆಹಲಿ: ಕೊವಿಡ್-19ನಿಂದಾಗಿ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದೇಶದಲ್ಲಿ ಮೃತರ ಸಂಖ್ಯೆಯು 11ಕ್ಕೆ ಏರಿಕೆಯಾಗಿದೆ.

ಈಗ ಸೋಂಕಿತರ ಪ್ರಕರಣಗಳ ಸಂಖ್ಯೆಯು 543ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಮೃತಪಟ್ಟ ವ್ಯಕ್ತಿಗೆ ರಕ್ತದೊತ್ತಡ ಮತ್ತು ಮಧುಮೇಹ ಹೆಚ್ಚಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಮೆತ್ತರಡು ಪ್ರಕರಣಗಳು ಪತ್ತೆಯಾಗಿದೆ. ತೆಲಂಗಾಣ ಡಿಎಸ್ ಪಿಯ ಪುತ್ರನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇವರ ಮನೆಕೆಲಸ ಮಾಡುತ್ತಿದ್ದ ಮಹಿಳೆಗೂ ಸೋಂಕು ತಗುಲಿದೆ ಎಂದು ವರದಿಗಳು ಹೇಳಿವೆ.

ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿದ ಡಿಎಸ್ ಪಿ ಮತ್ತು ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.