ಮುಂಬೈ: ಮೇಲ್ಸೇತುವೆ ಕುಸಿದು 6ಮಂದಿ ದುರ್ಮರಣ

ಮುಂಬೈ: ಮೇಲ್ಸೇತುವೆ ಕುಸಿದು 6ಮಂದಿ ದುರ್ಮರಣ

YK   ¦    Mar 15, 2019 10:54:05 AM (IST)
ಮುಂಬೈ: ಮೇಲ್ಸೇತುವೆ ಕುಸಿದು 6ಮಂದಿ ದುರ್ಮರಣ

ಮುಂಬೈ: ಗುರುವಾರ ಸಂಜೆ ನಗರದ ಛತ್ರಪತಿ ಶಿವಾಜಿ ಟರ್ಮಿನಲ್ಸ್ ಬಳಿ ಮೇಲ್ಸೇತುವೆ ಕುಸಿದು ಬಿದ್ದ ಪರಿಣಾಮ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಘಟನೆಯಲ್ಲಿ 31ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರೂ ಮಹಿಳೆಯರೂ ಸೇರಿದ್ದಾರೆ. ಗುರುವಾರ ಸಂಜೆ ಜನಸಾಂದ್ರತೆ ಹೆಚ್ಚಾಗಿದ್ದ ವೇಳೆ ಮೇಲ್ಸೇತುವೆ ಏಕಾಏಕಿ ಕುಸಿದು ಬಿದ್ದಿದೆ.

ಈ ವೇಳೆ ನಡೆದುಕೊಂಡು ಹೋಗುತ್ತಿದ್ದವರು ಗಾಯಗೊಂಡಿದ್ದಾರೆ.