ರಾಮ ಜನ್ಮಭೂಮಿ ಪ್ರದೇಶದಲ್ಲಿ ದೇವರ ಮೂರ್ತಿಗಳು ಪತ್ತೆ

ರಾಮ ಜನ್ಮಭೂಮಿ ಪ್ರದೇಶದಲ್ಲಿ ದೇವರ ಮೂರ್ತಿಗಳು ಪತ್ತೆ

HSA   ¦    May 21, 2020 04:12:16 PM (IST)
ರಾಮ ಜನ್ಮಭೂಮಿ ಪ್ರದೇಶದಲ್ಲಿ ದೇವರ ಮೂರ್ತಿಗಳು ಪತ್ತೆ

ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಭೂಮಿ ಅಗೆಯುತ್ತಿದ್ದ ವೇಳೆ ಶಿವಲಿಂಗ, ದೇವ, ದೇವತೆಯರ ಮೂರ್ತಿಗಳು ಮತ್ತು ಕಲಾಕೃತಿಗಳು ಪತ್ತೆಯಾಗಿದೆ.

ರಾಮ ಜನ್ಮಭೂಮಿ ಆವರಣದಲ್ಲಿ ಭೂ ಅಗೆತದದ ವೇಳೆ ಕೆಲವೊಂದು ಕಲಾಕೃತಿಗಳ ಚಿತ್ರವನ್ನು ಅಧಿಕಾರಿಗಳು ಬಿಡುಗಡೆ ಮಾಡಿರುವರು. ದೇವ ಮತ್ತು ದೇವತೆಯರ ಮೂರ್ತಿಗಳು, ಶಿವಲಿಂಗ ಕೂಡ ಪತ್ತೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವರು.

ನೆಲವನ್ನು ಸಮತಟ್ಟು ಮಾಡುವಂತಹ ಕಾರ್ಯವು ಕಳೆದ ಹತ್ತು ದಿನಗಳಿಂದ ನಡೆಯುತ್ತಿದೆ ಮತ್ತು ಅವಶೇಷಗಳನ್ನು ಕಾರ್ಮಿಕರು ತೆಗೆಯುತ್ತಿದ್ದಾರೆ. ಈ ವೇಳೆ ಮೂರ್ತಿಗಳು ಪತ್ತೆ ಆಗಿದೆ.