ಜಮ್ಮುಕಾಶ್ಮೀರದ ಏಳು ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ

ಜಮ್ಮುಕಾಶ್ಮೀರದ ಏಳು ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ

HSA   ¦    Nov 21, 2020 04:37:47 PM (IST)
ಜಮ್ಮುಕಾಶ್ಮೀರದ ಏಳು ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ

ಶ್ರೀನಗರ: ಜಾರಿ ನಿರ್ದೇಶನಾಲಯ(ಇ.ಡಿ) ಶನಿವಾರ(ನ.21)ರಂದು ಜಮ್ಮುಕಾಶ್ಮೀರದ ಏಳು ಕಡೆಗಳಲ್ಲಿ ದಾಳಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಂತೆ ಜಮ್ಮು ಕಾಶ್ಮೀರ ಬ್ಯಾಂಕ್ ನಲ್ಲಿ ನಡೆದಿರುವಂತಹ ಸಂಶಯಾಸ್ಪದ ವರ್ಗಾವಣೆಯನ್ನು ಗಮನಿಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಶ್ರೀನಗರದ ಆರು ಮತ್ತು ಅನಂತನಾಗ್ ನ ಒಂದು ಪ್ರದೇಶದಲ್ಲಿ ಜಾರಿ ನಿರ್ದೇಶನಾಲಯವು ದಾಳಿ ಮಾಡಿದೆ.

ಜಮ್ಮುಕಾಶ್ಮೀರದ ವಿವಿಧ ಖಾತೆಗಳಲ್ಲಿ ನಡೆದಿರುವಂತಹ ಸಂಶಯಾಸ್ಪದ ವರ್ಗಾವಣೆಗೆ ಅನುಗುಣವಾಗಿ ಜಮ್ಮುಕಾಶ್ಮೀರ ಬ್ಯಾಂಕ್ ನ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.