ಆಸ್ಪತ್ರೆಯಲ್ಲಿ 70 ಮಕ್ಕಳ ಮೃತಪಟ್ಟ ಪ್ರಕರಣ: ವೈದ್ಯ ಕಫೀಲ್ ಖಾನ್ ವಿರುದ್ಧದ ದೋಷಾರೋಪ ಕೈಬಿಟ್ಟ ಪೊಲೀಸರು

ಆಸ್ಪತ್ರೆಯಲ್ಲಿ 70 ಮಕ್ಕಳ ಮೃತಪಟ್ಟ ಪ್ರಕರಣ: ವೈದ್ಯ ಕಫೀಲ್ ಖಾನ್ ವಿರುದ್ಧದ ದೋಷಾರೋಪ ಕೈಬಿಟ್ಟ ಪೊಲೀಸರು

YK   ¦    Nov 27, 2017 10:59:07 AM (IST)
ಆಸ್ಪತ್ರೆಯಲ್ಲಿ 70 ಮಕ್ಕಳ ಮೃತಪಟ್ಟ ಪ್ರಕರಣ: ವೈದ್ಯ ಕಫೀಲ್ ಖಾನ್ ವಿರುದ್ಧದ ದೋಷಾರೋಪ ಕೈಬಿಟ್ಟ ಪೊಲೀಸರು

ಲಖನೌ: ಆಮ್ಲಜನಕ ಕೊರತೆಯಿಂದ ಉತ್ತರ ಪ್ರದೇಶದ ಗೋರಖಪುರ ಬಿಆರ್ಡಿ ಆಸ್ಪತ್ರೆಯಲ್ಲಿ ಸುಮಾರು 70 ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ವೈದ್ಯ ಡಾ. ಕಫೀಲ್ ಖಾನ್ ವಿರುದ್ಧ ಹೊರಿಸಲಾಗಿದ್ದ ದೋಷಾರೋಪಗಳನ್ನು ಸಾಕ್ಷ್ಯಾದಾರ ಕೊರತೆಯಿಂದ ಪೊಲೀಸರು ಕೈಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವೈದ್ಯ ಡಾ.ಕಫೀಲ್ ಖಾನ್ ವಿರುದ್ಧ ಖಾಸಗಿ ಸೇವೆ ಮತ್ತು ಭ್ರಷ್ಟಾಚಾರದ ಆರೋಪವನ್ನು ಮಾಡಲಾಗಿತ್ತು. ರಾಜ್ಯ ವೈದ್ಯಕೀಯ ಶಿಕ್ಷಣ ಮಹಾಪ್ರಧಾನ ನಿರ್ದೇಶಕ ಕೆ.ಕೆ. ಗುಪ್ತಾ ನಿರ್ದೇಶನದಂತೆ ಖಾನ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 120–ಬಿ, 409ರ ಅನ್ವಯ ಎಫ್ಐಆರ್ ದಾಖಲಾಗಿತ್ತು. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7/13, ಐಟಿ ಕಾಯ್ದೆಯ ಸೆಕ್ಷನ್ 66 ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯ ಸೆಕ್ಷನ್ 15ರ ಅನ್ವಯ ಎಫ್ಐಆರ್ ದಾಖಲಿಸಲಾಗಿತ್ತು. ಇದರ ಅನ್ವಯ ಖಾನ್ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.

ಆದರೆ ಇದೀಗ ಸಾಕ್ಷ್ಯಾಧಾರಗಳ ಕೊರತೆಯಿಂದ ಗೋರಖಪುರ ಪೊಲೀಸರು ಖಾನ್ ವಿರುದ್ಧದ ದೋಷಾರೋಪಗಳನ್ನು ಕೈಬಿಟ್ಟಿದ್ದಾರೆ.