ಇಬ್ಬರು ಉಗ್ರರ ಎನ್ ಕೌಂಟರ್ ಮಾಡಿದ ಸೇನೆ

ಇಬ್ಬರು ಉಗ್ರರ ಎನ್ ಕೌಂಟರ್ ಮಾಡಿದ ಸೇನೆ

HSA   ¦    May 19, 2020 06:09:07 PM (IST)
ಇಬ್ಬರು ಉಗ್ರರ ಎನ್ ಕೌಂಟರ್ ಮಾಡಿದ ಸೇನೆ

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ನ ಇಬ್ಬರು ಉಗ್ರರನ್ನು ಭಾರತೀಯ ಸೇನೆಯು ಮಂಗಳವಾರ ಹೊಡೆದುರುಳಿಸಿದೆ.

ಶ್ರೀನಗರದ ನವಕದಾಲ್ ಪ್ರದೇಶದಲ್ಲಿ ಪ್ರತ್ಯೇಕವಾದಿ ಮತ್ತು ತೆಹರೀಕ್ ಎ ಹುರಿಯತ್ ಕಾರ್ಯಾಧ್ಯಕ್ಷ ಅಶ್ರಫ್ ಸೆಹ್ರಾಯಿ ಮಗ ಜುನೈದ್ ಸೆಹ್ರಾಯಿ ಸಹಿತ ಇಬ್ಬರನ್ನು ಭಾರತೀಯ ಸೇನೆಯು ಎನ್ ಕೌಂಟರ್ ಮಾಡಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ಉಗ್ರರು ಈ ಪ್ರದೇಶದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ ಬಳಿಕ ಸೇನೆಯು ದಾಳಿ ನಡೆಸಿದೆ. ಎರಡು ಆಯುಧ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.