ಮೃತಪಟ್ಟ ಯೋಧ ಏಳು ವರ್ಷಗಳ ನಂತರ ಮರಳಿ ಮನೆಗೆ

ಮೃತಪಟ್ಟ ಯೋಧ ಏಳು ವರ್ಷಗಳ ನಂತರ ಮರಳಿ ಮನೆಗೆ

Jun 16, 2016 05:35:36 PM (IST)

ಡೆಹ್ರಾಡೂನ್: ಸುಮಾರು ಏಳು ವರ್ಷಗಳ ಹಿಂದೆ ಯೋಧನೊಬ್ಬ ಮೃತಪಟ್ಟಿದ್ದ ಎಂದು ಮಿಲಿಟರಿ ಅಧಿಕಾರಿಗಳು ಘೋಷಿಸಿದ್ದು, ಇದೀಗ ಅದೇ ಯೋಧ ತನ್ನ ಮನೆ ಸೇರಿದ ಆಶ್ಚರ್ಯಕರ ಘಟನೆ ಡೆಹ್ರಾಡೂನ್ ನ ಅಲ್ವಾರ್  ನಲ್ಲಿ ನಡೆದಿದೆ.

ಧರ್ಮವೀರ್ ಸಿಂಗ್(39) ಡೆಹ್ರಾಡೂನ್ ನ 66 ರೆಜಿಮೆಂಟ್ ನ  ಯೋಧ. ಈತ ನಾಪತ್ತೆಯಾಗಿ ಸುಮಾರು ಏಳು ವರ್ಷ ಕಳೆದಿದ್ದು, ಸುಮಾರು ಮೂರು ವರ್ಷದ  ಬಳಿಕ ಮಿಲಿಟರಿ ಅಧಿಕಾರಿಗಳು ನಿಯಮದಂತೆ ಸಿಂಗ್ ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ಮನೆಯವಗೆ ಸೇನೆಯಿಂದ ಪಿಂಚಣಿಯೂ ಬರುತ್ತಿತ್ತು. ಡೆಹ್ರಾಡೂನ್ ನಲ್ಲಿ ನನ್ನ ಸಹೋದರ ಸೇನಾ ವಾಹನ ಓಡಿಸುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿತ್ತು. ವಾಹನದಲ್ಲಿ ಇತರ ಇಬ್ಬರು ಯೋಧರಿದ್ದು ಯಾರ ದೇಹವೂ ಪತ್ತೆಯಾಗಿರಲಿಲ್ಲ. ಆದರೆ ಇಬ್ಬರು ಯೋಧರು ಮಾತ್ರ ತಮ್ಮ ಸೇನಾ ಘಟಕಗಳಿಗೆ ವಾಪಾಸ್ಸಾಗಿದ್ದರು. ಆದರೆ ನಮ್ಮ ಅಣ್ಣ ಮಾತ್ರ ಪತ್ತೆ ಎಂದು ಸಿಂಗ್ ಸಹೋದರ ತಿಳಿಸಿದ್ದಾರೆ.

ತನ್ನ ಪತಿ ಮೃತಪಟ್ಟಿದ್ದಾರೆಂದು ತನಗೆ ನಂಬಲು ಸಾಧ್ಯವಿರಲಿಲ್ಲ. ಎಂದಾದರೂ ಬಂದೇ ಬರುತ್ತಾರೆಂಬ ಆಶಾಭಾವನೆ ಇತ್ತು. ಗಂಡನ ಸುರಕ್ಷತೆಗಾಗಿ ಉಪವಾಸ ವ್ರತ ಮಾಡುತ್ತಿದ್ದೆ. ಮತ್ತೆ ಪತಿಯನ್ನು ಕಾಣುತ್ತೇನೆ ಎಂಬ ಭರವಸೆ ಇತ್ತು ಎಂದು ಸಿಂಗ್ ಪತ್ನಿ ಮನೋಜ್ ದೇವಿ ಸಂತಸದಿಂದ ಹೇಳಿದರು.

2009ರ ಅಪಘಾತದ ನಂತರ ಏನು ನಡೆಯಿತು ಎಂಬುದು ನನಗೆ ನೆನಪಿಲ್ಲ.  ತಾನು ಕಳೆದ ವಾರ ಹರಿದ್ವಾರದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದದ್ದು ನೆನಪಿದೆ. ಆಗ ಬೈಕ್ ವೊಂದು ನನಗೆ ಡಿಕ್ಕಿ ಹೊಡೆದಿತ್ತು. ಕೂಡಲೇ ಬೈಕ್ ಸವಾರ ಆಸ್ಪತ್ರೆಗೆ ದಾಖಲಿಸಿದ್ದ. ಧರ್ಮವೀರ್ ಗೆ ಪ್ರಜ್ಞೆ ಬಂದಾಗ ಹಿಂದಿನ ನೆನಪುಗಳೆಲ್ಲ ಮರುಕಳಿಸಲು ಆರಂಭವಾಗಿದ್ದವು ಎಂದು ಚಿಕಿತ್ಸೆ ನೀಡಿದ್ದ ವೈದ್ಯ ರಾಮ್ ನಿವಾಸ್ ತಿಳಿಸಿದ್ದಾರೆ. ಡಿಕ್ಕಿ ಹೊಡೆದಿದ್ದ ಬೈಕ್ ಸವಾರ ತನಗೆ 500 ರೂಪಾಯಿ ನೀಡಿದ್ದ. ಆ ಹಣವನ್ನು ತೆಗೆದುಕೊಂಡು ನಾನು ಟಿಕೆಟ್ ಪಡೆದು ದೆಹಲಿಗೆ ಆಗಮಿಸಿದ್ದೆ. ತದನಂತರ ಅಲ್ಲಿಂದ ಅಲ್ವಾರ್ ಸಮೀಪ ಇರುವ ನನ್ನ ಗ್ರಾಮವಾದ ಭಿಟೆಡಾಕ್ಕೆ ಬಂದಿದ್ದೇನೆ ಎಂದು ಸಿಂಗ್ ವಿವರಿಸಿದ್ದಾರೆ. ತನ್ನನ್ನು ಮತ್ತೆ ಕುಟುಂಬದವರ ಜೊತೆ ಸೇರಿಸಿದ್ದಕ್ಕೆ ದೇವರಿಗೆ ಧನ್ಯವಾದ ಸಮರ್ಪಿಸುತ್ತೇನೆ. ತನ್ನ ಕುಟುಂಬಸ್ಥರನ್ನು ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕಲಿಯುತ್ತಿರುವ ಮಗಳನ್ನು ಗುರುತಿಸಿ ತುಂಬಾ ಖುಷಿಪಟ್ಟೆ ಎಂದು ಸಿಂಗ್ ತಿಳಿಸಿದ್ದಾರೆ.