ಬೋಟ್ ಮುಳುಗಿ 13 ಮಂದಿ ಜಲಸಮಾಧಿ

ಬೋಟ್ ಮುಳುಗಿ 13 ಮಂದಿ ಜಲಸಮಾಧಿ

Nov 12, 2017 09:38:15 PM (IST)
ಬೋಟ್ ಮುಳುಗಿ 13 ಮಂದಿ ಜಲಸಮಾಧಿ

ವಿಜಯವಾಡ: ಬೋಟ್ ಮುಳುಗಿ 13 ಮಂದಿ ಪ್ರವಾಸಿಗರು ಜಲಸಮಾಧಿಯಾದ ದುರ್ಘಟನೆ ಆಂಧ್ರಪ್ರದೇಶದ ಕೃಷ್ಣ ನದಿಯಲ್ಲಿ ಭಾನುವಾರ ನಡೆದಿದೆ ಎಂದು ವರದಿಗಳು ಹೇಳಿವೆ.

ಕೃಷ್ಣ ಜಿಲ್ಲೆಯ ಇಬ್ರಾಹಿಂ ಪಟ್ಟಣದಲ್ಲಿರುವ ಭವಾನಿ ಐಲ್ಯಾಂಡ್ ನಿಂದ ಪವಿತ್ರ ಸಂಗಮಕ್ಕೆ ಹೋಗುವ ವೇಳೆ ಈ ದುರ್ಘಟನೆ ನಡೆದಿದೆ. ಬೋಟ್ ಮುಳುಗಿ 13 ಮಂದಿ ಪ್ರವಾಸಿಗರು ನೀರು ಪಾಲಾಗಿದ್ದಾರೆ. ಎಲ್ಲರ ಶವವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸಂಜೆ ವೇಳೆಗೆ ಈ ಘಟನೆ ನಡೆದಿದ್ದು, ಪ್ರವಾಸಿಗರನ್ನು ಹೊತ್ತುಕೊಂಡು ಹೋಗುತ್ತಿದ್ದ ಖಾಸಗಿ ಬೋಟ್ ದುರ್ಘಟನೆಗೀಡಾಗಿದೆ. ಬೋಟ್ ನಲ್ಲಿ ಸುಮಾರು 34 ಜನರನ್ನು ತುಂಬಿದ್ದ ಕಾರಣ ಬೋಟ್ ಮಧ್ಯದಲ್ಲೇ ಮುಳುಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.