ಜೈಲಿನ ಗೋಡೆಗೆ ತಲೆ ಬಡಿದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ

ಜೈಲಿನ ಗೋಡೆಗೆ ತಲೆ ಬಡಿದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ

HSA   ¦    Feb 20, 2020 04:06:20 PM (IST)
ಜೈಲಿನ ಗೋಡೆಗೆ ತಲೆ ಬಡಿದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮಾ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜೈಲಿಗೆ ಗೋಡೆಗೆ ತಲೆ ಬಡಿದಿದ್ದಾನೆ ಎಂದು ವರದಿಯಾಗಿದೆ.

ಸಣ್ಣಪುಟ್ಟ ಗಾಯವಾಗಿರುವ ವಿನಯ್ ಶರ್ಮಾನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ತಿಳಿಸಿದ್ದಾರೆ.

ವಿನಯ್ ಶರ್ಮಾ ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿದ್ದು, ಇದು ಗಲ್ಲು ಶಿಕ್ಷೆಯಿಂದ ಪರಾಗಲು ಮಾಡುತ್ತಿರುವ ನಾಟಕವಾಗಿರಬಹುದು ಎಂದು ಹೇಳಲಾಗಿದೆ.

ಅಪರಾಧಿಗಳಿಗೆ  ಮಾರ್ಚ್ 3ರಂದು ಗಲ್ಲು ಶಿಕ್ಷೆ ನೀಡಬೇಕು ಎಂದು ದೆಹಲಿ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿದೆ.