ಅಮೆರಿಕದ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನ; ಭಾರತಕ್ಕೆ ದೊರೆಯಲಿದೆ 6 ಮಿಲಿಯನ್ ಲಸಿಕೆ

ಅಮೆರಿಕದ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನ; ಭಾರತಕ್ಕೆ ದೊರೆಯಲಿದೆ 6 ಮಿಲಿಯನ್ ಲಸಿಕೆ

Ms   ¦    Jun 10, 2021 05:00:59 PM (IST)
ಅಮೆರಿಕದ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನ; ಭಾರತಕ್ಕೆ ದೊರೆಯಲಿದೆ 6 ಮಿಲಿಯನ್ ಲಸಿಕೆ

ವಾಷಿಂಗ್ಟನ್: ಅಮೆರಿಕ ಬೆಂಬಲಿತ ವಿಶ್ವಸಂಸ್ಥೆಯ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನದ ಅಡಿಯಲ್ಲಿ ಭಾರತಕ್ಕೂ ಲಸಿಕೆ ದೊರೆಯಲಿದೆ ಎಂದು ಬೈಡನ್ ಸರ್ಕಾರ ತಿಳಿಸಿದೆ. 

 

 ವಿಶ್ವಸಂಸ್ಥೆಯ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದ ಮೂಲಕ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ 80 ಮಿಲಿಯನ್ ಲಸಿಕೆಯನ್ನು ದಕ್ಷಿಣ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಘೋಷಿಸಿದ್ದರು. ಜೂನ್ 2ರಂದು ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮ ಪ್ರಾರಂಭವಾಗಿದ್ದು ಇಲ್ಲಿಯವರೆಗೂ 1.9 ಕೋಟಿ ಲಸಿಕೆಯನ್ನು ಪೂರೈಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

 

ಜೂನ್ ಅಂತ್ಯದ ವೇಳೆಗೆ ಜಾಗತಿಕವಾಗಿ 80 ಮಿಲಿಯನ್(8 ಕೋಟಿ) ಲಸಿಕೆಗಳನ್ನು ಹಂಚುವ ಕಾರ್ಯಕ್ರಮವನ್ನು ಅಮೆರಿಕಾ ಹಾಕಿಕೊಂಡಿದೆ.ಇನ್ನು ಭಾರತದ ಪಾಲಿನ ಲಸಿಕೆಗಳು ಭಾರತಕ್ಕೆ ಯಾವಾಗ ಬರಲಿದೆ ಎಂಬುದರ ಕುರಿತು ನನ್ನಲ್ಲಿ ನಿರ್ದಿಷ್ಟ ವಿವರಗಳಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

 

ಭಾರತಕ್ಕೆ ಸುಮಾರು ಆರು ಮಿಲಿಯನ್ ಕೋವಾಕ್ಸ್ ಲಸಿಕೆಗಳನ್ನು ನಿಗದಿಪಡಿಸಲಾಗಿದೆ ಎಂದು ನಾನು ನಂಬುತ್ತೇನೆ ಎಂದು ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.