ಏಳು ವರ್ಷಗಳ ಮೊದಲೇ ಚೀನಾದ ದಾಳಿ ಬಗ್ಗೆ ಎಚ್ಚರಿಸಿದ್ದ ಧೋವಲ್!

ಏಳು ವರ್ಷಗಳ ಮೊದಲೇ ಚೀನಾದ ದಾಳಿ ಬಗ್ಗೆ ಎಚ್ಚರಿಸಿದ್ದ ಧೋವಲ್!

HSA   ¦    Jun 29, 2020 03:15:00 PM (IST)
ಏಳು ವರ್ಷಗಳ ಮೊದಲೇ ಚೀನಾದ ದಾಳಿ ಬಗ್ಗೆ ಎಚ್ಚರಿಸಿದ್ದ ಧೋವಲ್!

ನವದೆಹಲಿ: ಚೀನಾವು ಗಡಿಯಲ್ಲಿ ಆಕ್ರಮಣ ಮಾಡಲಿದೆ ಎಂದು ಏಳು ವರ್ಷಗಳ ಮೊದಲೇ ಈಗಿನ ರಾಷ್ಟ್ರೀ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಎಚ್ಚರಿಸಿದ್ದರು ಎಂದು ವರದಿಯಾಗಿದೆ.

ಜೂನ್ 15ರಂದು ನಡೆದ ಸಂಘರ್ಷದಲ್ಲಿ 15 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. 20ಕ್ಕೂ ಹೆಚ್ಚು ಚೀನಿ ಸೈನಿಕರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ.

ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡೆದಿರುವಂತಹ ಸಂಘರ್ಷದ ಬಳಿಕ ಮಾತುಕತೆಗಳು ನಡೆಯುತ್ತಲೇ ಇದೆ. ಇದೇ ವೇಳೆ ಚೀನಾವು ಗಡಿಯಲ್ಲಿ ಸೇನಾ ಬಲವನ್ನು ಕೂಡ ಹೆಚ್ಚು ಮಾಡುತ್ತಿದೆ.

2013ರಲ್ಲಿ ರಾಷ್ಟ್ರೀಯ ಸಲಹೆಗಾರ ಅಜಿತ್ ಧೋವಲ್ ಅವರು ಚೀನಾವು ಪಾಕಿಸ್ತಾನದ ಜತೆಗೆ ಸೇರಿ ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸಿದೆ ಎಂದು ಹೇಳಿದ್ದರು.

ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದಂತಹ ಧೋವಲ್ ಅವರು ಚೀನಾದ ಕೆಲವು ಗುಪ್ತಚರರು ಕೆಲವೊಂದು ರಾಷ್ಟ್ರಗಳಲ್ಲಿ ಯೋಜನಾಬದ್ಧವಾಗಿ ಗುಪ್ತಚರಿಗೆ ಮಾಡುತ್ತಿರುವ ಬಗ್ಗೆ ಹೇಳಿದ್ದರು.