ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ಬೋರ್ಡ್ ಗೆ ಹರ್ಷವರ್ಧನ್ ಕಾರ್ಯಾಧ್ಯಕ್ಷ

ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ಬೋರ್ಡ್ ಗೆ ಹರ್ಷವರ್ಧನ್ ಕಾರ್ಯಾಧ್ಯಕ್ಷ

HSA   ¦    May 20, 2020 10:17:57 AM (IST)
ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ಬೋರ್ಡ್ ಗೆ ಹರ್ಷವರ್ಧನ್ ಕಾರ್ಯಾಧ್ಯಕ್ಷ

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ 34 ಸದಸ್ಯರ ಕಾರ್ಯನಿರ್ವಾಹಕ ಬೋರ್ಡ್ ಕಾರ್ಯಾಧ್ಯಕ್ಷರಾಗಿ ಮೇ 22ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಕೊವಿಡ್-19ನ್ನು ಭಾರತದಲ್ಲಿ ಒಂದು ಮಟ್ಟದಲ್ಲಿ ತಡೆಗಟ್ಟುವಲ್ಲಿ ಹರ್ಷವರ್ಧನ್ ಅವರ ಪಾತ್ರವು ಮಹತ್ವದ್ದಾಗಿದೆ. ಹೀಗಾಗಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಹರ್ಷವರ್ಧನ್ ಅವರು ಜಪಾನ್ ನ ಡಾ. ಹಿರೊಕಿ ನಕಟನಿ ಅವರ ಸ್ಥಾನಕ್ಕೆ ನೇಮಕವಾಗಿದ್ದಾರೆ.

ಸುಮಾರು 194 ರಾಷ್ಟ್ರಗಳು ಭಾರತದ ಪ್ರತಿನಿಧಿಯನ್ನು ಬೋರ್ಡ್ ನ ಕಾರ್ಯಾಧ್ಯಕ್ಷರನ್ನಾಗಿ ಮಾಡುವುದಕ್ಕೆ ಅನುಮತಿ ನೀಡಿದೆ ಎಂದು ವರದಿಗಳು ಹೇಳಿವೆ.