ಅಹ್ಮದಬಾದ್ ನಲ್ಲಿ ಕೋವಿಡ್ ೧೯ ಸೋಂಕಿಗೆ ೮೫ ವರ್ಷದ ಮಹಿಳೆ ಬಲಿ

ಅಹ್ಮದಬಾದ್ ನಲ್ಲಿ ಕೋವಿಡ್ ೧೯ ಸೋಂಕಿಗೆ ೮೫ ವರ್ಷದ ಮಹಿಳೆ ಬಲಿ

YK   ¦    Mar 26, 2020 10:35:18 AM (IST)
ಅಹ್ಮದಬಾದ್ ನಲ್ಲಿ ಕೋವಿಡ್ ೧೯ ಸೋಂಕಿಗೆ ೮೫ ವರ್ಷದ ಮಹಿಳೆ ಬಲಿ

ಅಹ್ಮದಬಾದ್: ಕೋವಿಡ್ ೧೯ ಸೋಕಿನಿಂದ ಬಳಲುತ್ತಿದ್ದ ೮೫ ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಮೃತ ವ್ಯಕ್ತಿಯು ಸೌದಿ ಅರೇಬಿಯಾದಿಂದ ವಾಪಾಸ್ಸಾಗಿದ್ದು ಪರೀಕ್ಷೆ ವೇಳೆ ಕೋವಿಡ್ ೧೯ ಇರುವುದು ದೃಢಪಟ್ಟಿದೆ. ನಂತರ ಆಕೆಯನ್ನು ಅಹ್ಮದಬಾದ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರ ಜತೆಗೆ ಮಹಿಳೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ಇದುವರೆಗೆ ದೇಶದಲ್ಲಿ ೬೦೬ ಕೋವಿಡ್ ೧೯ ಸೋಂಕಿತರಿದ್ದು, ಅದರಲ್ಲಿ ೪೩ ಮಂದಿ ವಿದೇಶಿ ಪ್ರಜೆಗಳಿದ್ದಾರೆ.