ಮಗು ಬೆಳ್ಳಗಿದೆ ಎಂದು ಕೊಂದೇ ಬಿಟ್ಟ ಅಪ್ಪ!

ಮಗು ಬೆಳ್ಳಗಿದೆ ಎಂದು ಕೊಂದೇ ಬಿಟ್ಟ ಅಪ್ಪ!

Nov 14, 2017 10:42:15 AM (IST)
ಮಗು ಬೆಳ್ಳಗಿದೆ ಎಂದು ಕೊಂದೇ ಬಿಟ್ಟ ಅಪ್ಪ!

ಕೋಲ್ಕತ್ತಾ: ಲೋಕದಲ್ಲಿ ಇಂತವರೂ ಇದ್ದಾರಲ್ಲಾ ಎಂದು ಅಚ್ಚರಿಯಾಗುತ್ತದೆ. ಯಾಕೆಂದರೆ ತನ್ನ ಎರಡು ತಿಂಗಳು ಮಗು ತುಂಬಾ ಬೆಳ್ಳಗಿದೆ ಎಂದು ತಂದೆ ಅದನ್ನು ಕೊಂದು ಹಾಕಿದಂತಹ ಅಮಾನವೀಯ ಘಟನೆಯು ಇಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ದಂಪತಿಗಳಾದ ಶೇಕ್ ನಜೀರ್ ಮತ್ತು ಸೈಮಾ ಬಿಬಿ ಇಬ್ಬರು ಕಪ್ಪಗಿದ್ದಾರೆ. ಆದರೆ ಕಳೆದ ಎರಡು ತಿಂಗಳ ಮೊದಲು ಈ ದಂಪತಿಗೆ ಬೆಳ್ಳಗಿನ ಮಗುವೊಂದು ಜನಿಸಿದೆ. ಆದರೆ ತಾವಿಬ್ಬರೂ ಕಪ್ಪಾಗಿರುವಾಗ ಮಗು ಹೇಗೆ ಬೆಳ್ಳಗಾಯಿತು ಎಂದು ಪತ್ನಿ ಮೇಲೆ ಸಂಶಯಗೊಂಡ ಶೇಕ್ ನಜೀರ್ ತನ್ನ ಮಗುವನ್ನೇ ಕೊಲೆಗೈದಿದ್ದಾನೆ.

ಮಗು ಬೆಳ್ಳಗಿದ್ದ ಬಗ್ಗೆ ಪ್ರತಿನಿತ್ಯ ದಂಪತಿ ಮಧ್ಯೆ ಜಗಳವಾಗುತ್ತಲೇ ಇತ್ತು. ಭಾನುವಾರ ಈ ಜಗಳವು ತುಂಬಾ ಮಿತಿಮೀರಿತ್ತು. ಪತ್ನಿಯ ಮೇಲೆ ಅತೀವ ಸಂಶಯಪಡುತ್ತಿದ್ದ ಶೇಕ್ ನಜೀರ್ ಮಗುವನ್ನು ಕೊಲ್ಲುವುದಾಗಿ ಹೇಳಿದ್ದ. ಸೋಮವಾರ ಬೆಳಗ್ಗೆ ಎದ್ದು ನೋಡುವಾಗ ಮಗುವ ಮೃತಪಟ್ಟಿದೆ ಎಂದು ಸೈಮಾ ಹೇಳಿದ್ದಾಳೆ.

ಆದರೆ ಮಗು ಸಾಯಲು ಜೋರಾಗಿದ್ದ ಚಳಿಯೇ ಕಾರಣವೆಂದು ನಜೀರ್ ಮನೆಯವರು ತಿಳಿಸಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.