ವಾಯುಸೇನೆಯಲ್ಲಿ ಮೊದಲ ಬಾರಿಗೆ ಮೂವರು ಮಹಿಳಾ ಪೈಲೆಟ್ ಸೇರ್ಪಡೆ

ವಾಯುಸೇನೆಯಲ್ಲಿ ಮೊದಲ ಬಾರಿಗೆ ಮೂವರು ಮಹಿಳಾ ಪೈಲೆಟ್ ಸೇರ್ಪಡೆ

Jun 18, 2016 02:51:44 PM (IST)

ಹೊಸದಿಲ್ಲಿ: ಭಾರತೀಯ ವಾಯುಸೇನೆಯಲ್ಲಿ ಮೊದಲ ಬಾರಿಗೆ ಮೂವರು ಮಹಿಳಾ ಪೈಲೆಟ್ ಗಳು ಸೇರ್ಪಡೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

India gets its first women fighter pilots -1ಭಾವನಾ ಕಂಠ್, ಮೋಹನಾ ಸಿಂಗ್ ಹಾಗೂ ಅವನಿ ಚತುರ್ವೇದಿ ಹೈದರಾಬಾದ್‍ನ ಸಿಕಂದರಾಬಾದ್ ವಾಯುಸೇನೆ ಅಕಾಡೆಮಿಯಲ್ಲಿ ನಡೆದ ಪರೇಡ್‍ನಲ್ಲಿ ಪಾಲ್ಗೊಂಡು ಚೊಚ್ಚಲ ಸೇರ್ಪಡೆಯ ಭಾಗ್ಯ ಪಡೆದರು. ಈ ಮೂವರು ಪೈಲಟ್‍ಗಳು ಯುದ್ಧವಿಮಾನದ ಚಾಲನೆಯ ಪ್ರಾಥಮಿಕ ತರಬೇತಿಯನ್ನು ಕರ್ನಾಟಕದ ಬೀದರ್ ವಾಯುನೆಲೆಯಲ್ಲಿ ಪಡೆದಿದ್ದಾರೆ. 150 ಗಂಟೆಗಳ ಹಾರಾಟದ ಅನುಭವನ್ನು ತರಬೇತಿ ಅವಧಿಯಲ್ಲಿ ಗಳಿಸಿಕೊಂಡಿದ್ದರು. ಮುಂದಿನ 6 ತಿಂಗಳು ಬ್ರಿಟನ್ ನಿರ್ಮಿತ ಹಾಕ್ ಸೂಪರ್ ಸಾನಿಕ್ ಯುದ್ಧ ವಿಮಾನಗಳ ಚಾಲನೆ ತರಬೇತಿ ಪಡೆಯಲಿದ್ದಾರೆ. ಸೇರ್ಪಡೆ ಸಂದರ್ಭ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ವಾಯುಸೇನೆ ಮುಖ್ಯಸ್ಥ ಅರೂಪ್ ರಾಹಾ ಕೂಡ ಉಪಸ್ಥಿತರಿದ್ದರು.