ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ: 20 ಮಂದಿ ದುರ್ಮರಣ

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ: 20 ಮಂದಿ ದುರ್ಮರಣ

YK   ¦    Feb 20, 2020 10:25:27 AM (IST)
ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ: 20 ಮಂದಿ ದುರ್ಮರಣ

ಚೆನ್ನೈ: ಬೆಂಗಳೂರಿನಿಂದ ಹೊರಟಿದ್ದ ಕೇರಳ ರಾಜ್ಯ ಸರ್ಕಾರಿ ಬಸ್ ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ 20 ಮಂದಿ ಮೃತಪಟ್ಟಿರುವ ಘಟನೆ ಗುರುವಾರ ತಮಿಳುನಾಡಿನ ತಿರ್ಪೂರು ಜಿಲ್ಲೆಯಲ್ಲಿ ನಡೆದಿದೆ.

ಅಪಘಾತದ ಭೀಕರತೆಗೆ ಬಸ್ ನಲ್ಲಿದ್ದ 19ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಟ್ಟು 48 ಪ್ರಯಾಣಿಕರು ಬೆಂಗಳೂರಿನಿಂದ ಕೇರಳದ ಎರ್ನಾಕುಳಂಗೆ ತೆರಳುತ್ತಿದ್ದರು.  ಮುಂಜಾನೆ 4.30ರ ಸುಮಾರಿಗೆ ಕೊಯಮತ್ತೂರು- ಸೇಲಂ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ.