ಸೇತುವೆಯಿಂದ ನದಿಗೆ ಬಿದ್ದ ಮದುವೆ ದಿಬ್ಬಣದ ಟ್ರಕ್: 20 ಮಂದಿಯ ದುರ್ಮರಣ

ಸೇತುವೆಯಿಂದ ನದಿಗೆ ಬಿದ್ದ ಮದುವೆ ದಿಬ್ಬಣದ ಟ್ರಕ್: 20 ಮಂದಿಯ ದುರ್ಮರಣ

SRJ   ¦    Apr 18, 2018 01:21:26 PM (IST)
ಸೇತುವೆಯಿಂದ ನದಿಗೆ ಬಿದ್ದ ಮದುವೆ ದಿಬ್ಬಣದ ಟ್ರಕ್: 20 ಮಂದಿಯ ದುರ್ಮರಣ

ಮಧ್ಯಪ್ರದೇಶ: ಮದುವೆ ಸಮಾರಂಭಕ್ಕೆಂದು ಜನರನ್ನು ಹೊತ್ತೊಯ್ಯುತ್ತಿದ್ದ ಮಿನಿ ಟ್ರಕ್ ಒಂದು ಚಾಲಕನ ನಿಯಂತ್ರಣ ತಪ್ಪಿ, ಸೇತುವೆಗೆ ಗುದ್ದಿ ನದಿಗೆ ಉರುಳಿ ಬಿದ್ದಿರುವ ಘೋರ ದುರಂತ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.

ಈ ದುರಂತದಲ್ಲಿ 21 ಮಂದಿ ಸ್ಥಳದಲ್ಲೇ ಸಾವಿನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮೆಲಿಯಾ ಬಳಿಯ ಜೋಗ್ ದಾಹ ಸೇತುವೆ ಬಳಿ ಅವಘಡ ನಡೆದಿದ್ದು, ಸುಮಾರು 60 ರಿಂದ 70 ಅಡಿ ಆಳಕ್ಕೆ ಟ್ರಕ್ ಉರುಳಿ ಬಿದ್ದಿದೆ.

ಘಟನಾ ಸ್ಥಳಕ್ಕೆ ಧಾವಿಸಿ ಬಂದಿರುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರು ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ಕೈಗೊಂಡಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದು, ಸಂತ್ರಸ್ಥ ಕುಟುಂಬದವರಿಗೆ ತಲಾ 2 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ. ಹಾಗೂ ಗಾಯಾಳುಗಳ ಚಿಕಿತ್ಸೆಗಾಗಿ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.