ಚೆನ್ನೈ: ಒಂದೇ ಬಾವಿಯಲ್ಲಿ 4 ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಚೆನ್ನೈ: ಒಂದೇ ಬಾವಿಯಲ್ಲಿ 4 ವಿದ್ಯಾರ್ಥಿನಿಯರ ಮೃತದೇಹ ಪತ್ತೆ

YK   ¦    Nov 25, 2017 12:04:21 PM (IST)
ಚೆನ್ನೈ: ಒಂದೇ ಬಾವಿಯಲ್ಲಿ 4 ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಚೆನ್ನೈ: ಒಂದೇ ಬಾವಿಯಲ್ಲಿ 4 ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾದ ಘಟನೆ ಶುಕ್ರವಾರದಂದು ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈನಿಂದ 88 ಕಿಮೀ ದೂರದಲ್ಲಿರುವ ಪಣಪ್ಪಾಕಂ ಗ್ರಾಮದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಗಳನ್ನು ದೀಪಾ, ಶಂಕರಿ, ಮೊನಿಷಾ ಹಾಗೂ ರೇವತಿ ಎಂದು ಗುರುತಿಸಲಾಗಿದೆ.

ಸಾವಿಗೆ ಈ ಹಿಂದೆ ವಿದ್ಯಾರ್ಥಿನಿಯರು ಪರೀಕ್ಷೆಯೊಂದರಲ್ಲಿ ಫೇಲ್ ಆಗಿದ್ದರಿಂದ ಶಿಕ್ಷಕರು ಅವರಿಗೆ ಬೈದಿದ್ದು, ಶಾಲೆಗೆ ಪೋಷಕರನ್ನು ಕರೆತರುವಂತೆ ಸೂಚಿಸಿದ್ದರು. ಈ ವಿಚಾರದಿಂದ ವಿದ್ಯಾರ್ಥಿನಿಯರು ಭಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

ಮೃತ ನಾಲ್ಕು ವಿದ್ಯಾರ್ಥಿನಿಯರು ಇಲ್ಲಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲನೇ ವರ್ಷದ ಪಿಯುಸಿ ಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ನಾಲ್ಕು ವಿದ್ಯಾರ್ಥಿಗಳು ಶುಕ್ರವಾರದಂದು ತರಗತಿಗೆ ಬಂದಿರಲಿಲ್ಲ. ವಿದ್ಯಾರ್ಥಿನಿಯರು ಕಾಣೆಯಾದ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸ್ನೇಹಿತರು ಶುಕ್ರವಾರ ರಾತ್ರಿ ಎಲ್ಲಾ ಕಡೆ ಹುಡುಕಾಡಿದಾಗ ಬಾವಿಯ ಬಳಿ ಅವರ ಸೈಕಲ್ಗಳು ಪತ್ತೆಯಾಗಿದ್ದವು ಎಂದು ತಿಳಿದು ಬಂದಿದೆ.